ಗಿನ್ನಿಸ್ ದಾಖಲೆಯ ಸ್ಕೇಟಿಂಗ್ ಪೋರನಿಗೆ ಜಾಲಾಡಿಯಲ್ಲಿ ಸನ್ಮಾನ

Click Here

Call us

Call us

Call us

ಸಹಕಾರದೊಂದಿಗೆ ಸನ್ಮಾನವನ್ನು ಮಾಡಿ ಬೀಳ್ಕೊಟ್ಟ ಜಾಲಾಡಿ ಯುವಕರು

Call us

Click Here

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಲಾಗಿ ನಿಲ್ಲಿಸಲಾಗಿದ್ದ 37 ಟಾಟಾ ಸುಮೋಗಳ ಕೆಳಗೆ 33.64 ಸೆಕೆಂಡ್‌ಗಳಲ್ಲಿ ಲಿಂಬೋ ಸ್ಕೇಟಿಂಗ್ ಮೂಲಕ ಸಾಗಿ ಗಿನ್ನಿಸ್ ದಾಖಲೆ ಬರೆದಿದ್ದ ಬೆಂಗಳೂರಿನ ಒಂದನೇ ತರಗತಿಯ ಪೋರ ಓಂ ಸ್ವರೂಪ್ ಗೌಡ ಅಚಾನಾಕ್ಕಾಗಿ ತಾಲೂಕಿನ ಜಾಲಾಡಿ ಯುವಕರಿಗೆ ಮುಖಾಮುಖಿಗುವ ಪ್ರಸಂಗವೊಂದು ಎದುರಾಗಿತ್ತು. ತೊಂದರೆಯಲ್ಲಿದ್ದ ಆತನ ಕುಟುಂಬಕ್ಕೆ ಸಹಕಾರವಿತ್ತರಲ್ಲದೇ, ಗಿನ್ನಿಸ್ ದಾಖಲೆ ನಿರ್ಮಿಸಿದ್ದ  ಹುಡುಗನ ಸಾಧನೆಯನ್ನು ಮೆಚ್ಚಿ ಸನ್ಮಾನಿಸಿ ಔದಾರ್ಯ ಮೆರೆದಿದ್ದಾರೆ.

ಮರ್ಡೇಶ್ವರದಿಂದ ಉಡುಪಿ ಕಡೆಗೆ ಪೋಷಕರೊಂದಿಗೆ ಓಂ ಸ್ವರೂಪ್ ಗೌಡ ತೆರಳುತ್ತಿದ್ದ ಕಾರು ಜಾಲಾಡಿಯ ಬಳಿ ಪಂಕ್ಚರ್ ಆಗಿತ್ತು. ದುರಸ್ತಿಗೊಳಿಸುವ ಪಂಕ್ಚರ್ ಅಂಗಡಿ ಬಾಗಿಲು ಹಾಕಿದ್ದರಿಂದ ಹೆಮ್ಮಾಡಿಯ ಜ್ಯುವೆಲ್ ಪಾರ್ಕಿನಲ್ಲಿ ತಂಗುವಂತೆ ಅಲ್ಲಿಗೆ ಆಗಮಿಸಿದ ಜಾಲಾಡಿಯ ಕೆಲ ಯುವಕರು ಸಲಹೆಯಿತ್ತರಲ್ಲರೇ ಕೊನೆಗೂ ದುರಸ್ತಿಗೊಳಿಸಿಗೊಳಿಸಲು ಸಹಕಾರವಿತ್ತರು.

ಈ ಮಧ್ಯೆ ಚೂಟಿಯಾಗಿ ಮಾತನಾಡುತ್ತಿದ್ದ ಹುಡುಗನನ್ನು ಗುರುತಿಸಿದ ಸ್ಥಳೀಯರು ಹತ್ತು ದಿನಗಳ ಹಿಂದಷ್ಟೇ ಗಿನ್ನಿಸ್ ದಾಖಲೆ ಬರೆದಿದ್ದ ಪೋರ ಈತನೇ ಎಂಬುದನ್ನು ಸ್ಪಷ್ಟಪಡಿಸಿಕೊಂಡು ಜಾಲಾಡಿಯ ಬೊಬ್ಬರ್ಯ ದೈವಸ್ಥಾನದಲ್ಲಿ ಆದರದಿಂದ ಸನ್ಮಾನಿಸಿ ಕುಟುಂಬವನ್ನು ಬೀಳ್ಕೊಟ್ಟರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಓಂ ಸ್ವರೂಪ್ ಗೌಡ ಅವರ ತಂದೆ ಎಚ್. ಯೋಗೀಶ್ ತಾಯಿ ಸುನಿತಾ ಎಂ ಹಾಗೂ ಅವರ ಕುಟುಂಬದ ಸದಸ್ಯರು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ರಾಘವೇಂದ್ರ ದೇವಾಡಿಗ, ದೇವಾಡಿಗ ಸಂಘದ ಅಧ್ಯಕ್ಷ ದಿವಾಕರ ದೇವಾಡಿಗ, ದೈವಸ್ಥಾನದ ಪಾತ್ರಿ ಚಿಕ್ಕ ದೇವಾಡಿಗ, ಶಿಕ್ಷಕ ಕಿರಣ್ ದೇವಾಡಿಗ ಹಾಗೂ ಜೆಸಿಸಿ ಕ್ರಿಕೆಟ್ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು/ ಕುಂದಾಪ್ರ ಡಾಟ್ ಕಾಂ ಸುದ್ದಿ/

Click here

Click here

Click here

Click Here

Call us

Call us

Om-Swaroop-Gowda0Om-Swaroop-Gowda3 Om-Swaroop-Gowda2 Om-Swaroop-Gowda1

Leave a Reply