ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರತಿಯೊಬ್ಬ ವ್ಯಕ್ತಿಯೂ ಇನ್ನೋಬ್ಬರಿಗಿಂತ ಭಿನ್ನನಾಗಿರುತ್ತಾನೆ ಈ ಭಿನ್ನತೆಯೇ ಒಬ್ಬರನ್ನು ಉಳಿದವರಿಗಿಂತ ಶ್ರೇಷ್ಠನನ್ನಾಗಿ ಪರಿಗಣಿಸುವಂತೆ ಮಾಡುತ್ತದೆ ಕೆಲಸದಲ್ಲಿ ಶ್ರಧ್ಧೆ ಪರಿಸರದ ಕುರಿತು ಕಾಳಜಿ ಲೋಕೋತ್ರತರ ದೃಷ್ಠಿಯಿಂದ ಸಕಲ ಜೀವಿಗಳ ಒಳಿತನ್ನು ಬಯಸುವುದು ಮಹಾತ್ಮರ ಲಕ್ಷಣ ಜೀವನದ ನಡಿಗೆ ಆ ದಿಸೆಯಲ್ಲಿರುವುದು ಲೇಸು ವ್ಯಕ್ತಿ ನಶ್ವರ ಸಾಧನೆ ಶಾಶ್ವತ ಶ್ರೇಷ್ಠ ತತ್ವಗಳನ್ನು ಶ್ರೇಷ್ಠ ಸಾಧಕರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಬೈಂದೂರು ವಲಯ ಶ್ರೀಮದ್ ಭಗವದ್ಗೀತಾ ಜಯಂತಿ ಆಚರಣ ಸಮಿತಿಯ ಗೌರವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು.
ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಸ್ವರ್ಣವಲ್ಲಿ ಸೋಂದಾ ಗಂಗಾದರೇಂದ್ರ ಸರಸ್ವತಿ ಸ್ವಾಮೀಜಿಯವರು ಹಮ್ಮಿಕೊಂಡ ಶ್ರೀ ಭಗವದ್ಗೀತಾ ಸಪ್ತಾಹ ಆಚರಣೆಯ ರೂಪುರೇಷೆ ಕುರಿತು ಸಮಾಲೋಚನಾ ಸಭೆಯಲ್ಲಿ ಭಗವದ್ಗೀತಾ ಜಯಂತಿ ಆಚರಣ ಸಮಿತಿಯ ಹೊಳ್ಳ ದಂಪತಿಗಳಿಗೆ ನೀಡಿದ ಗೌರವ ಸ್ವೀಕರಿಸಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಶ್ರೀಮದ್ ಭಗವದ್ಗೀತಾ ಜಯಂತಿ ಆಚರಣ ಸಮಿತಿಯ ಸಂಯೋಜಕ ಬಿ.ರಾಮಕೃಷ್ಣ ಶೇರುಗಾರ್ ವಹಿಸಿದ್ದರು ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರಾಮಕ್ಷತ್ರಿಯ ಸಮಾಜ ಬೈಂದೂರಿನ ಅಧ್ಯಕ ಗೋಪಾಲ ನಾಯಕ್, ನಿವೃತ್ತ ಶಿಕ್ಷಕ ರಮೇಶ ವೈದ್ಯ. ಸಮಿತಿಯ ಉಪಾದ್ಯಕ್ಷ ಭಗವದ್ಗೀತಾ ಆಚರಣಾ ಸಮಿತಿಯ ಮಂಗೇಶ್ ಶೈಣೈ ಯಳಜಿತ ಶ್ರೀ ರಾಮಕ್ಷತ್ರಿಯ ಸಮಾಜ ಬೈಂದೂರಿನ ಉಪಾಧ್ಯಕ್ಷ ಶ್ರೀನಿವಾಸ ಮದ್ದೋಡಿ ಉಪಸ್ಥಿತರಿದ್ದರು.
ರಾಮಕ್ಷತ್ರಿಯ ಮಾತೃಮಂಡಳಿಯ ಸದಸ್ಯರು ಪ್ರಾರ್ಥನೆ ಮಾಡಿದರು ಸಮಿತಿಯ ಕಾರ್ಯದರ್ಶಿ ಕೇಶವ ನಾಯಕ್ ಸರ್ವರನ್ನು ಸ್ವಾಗತಿಸಿದರು ಉಪಾಧ್ಯಕ್ಷರಾದ ವಿ.ಎಚ್.ನಾಯಕ್ ಪ್ರಾಸ್ತವಿಕ ಮಾತುಗಳನ್ನಾಡಿದರು ಖಜಾಂಚಿ ಗಣೇಶ ಪ್ರಸನ್ನ ಮಯ್ಯ ಧನ್ಯವಾದ ಸಲ್ಲಿಸಿದರು. ಬೈಂದೂರು ವಲಯ ಸಂಚಾಲಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು.