ಜನಸೇವೆಯಿಂದ ಮಾತ್ರ ಜನತೆಯ ವಿಶ್ವಾಸ ಗಳಿಸಲು ಸಾಧ್ಯ: ಸಚಿವ ಪ್ರಮೋದ್ ಮಧ್ವರಾಜ್

Click Here

Call us

Call us

Call us

ಬೈಂದೂರಿನಲ್ಲಿ ಸಚಿವ ಪ್ರಮೋದ್ ಮಧ್ಯರಾಜ್‌ಗೆ ಅಭಿನಂದನೆ

Call us

Click Here

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಧಿಕಾರ ಹಿಡಿಯಲು ಹವಣಿಸುವವರು ಮೊದಲು ಜನಸೇವೆ ಮಾಡಿ ಜನರ ಹೃದಯವನ್ನು ಗೆಲ್ಲವಂತಾಗಬೇಕು. ಸೇವೆಯ ಮೂಲಕ ಮಾತ್ರ ಜನರ ವಿಶ್ವಾಸವನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದು ರಾಜ್ಯ ಮೀನುಗಾರಿಕಾ, ಕ್ರೀಡಾ ಮತ್ತು ಯುವಜನಸೇವಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಬೈಂದೂರು ಹಾಗೂ ವಂಡ್ಸೆ ಇಲ್ಲಿನ ರೋಟರಿ ಭವನದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸ್ವಾತಂತ್ರೋತ್ತರ ಭಾರತವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ದ ಏಕೈಕ ಪಕ್ಷ ಕಾಂಗ್ರೆಸ್. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರೂ ಅದು ಪ್ರಚಾರಕ್ಕೆ ಬಾರದ ಕಾರಣದಿಂದಾಗಿ ಜನರ ಗಮನಕ್ಕೆ ಬರಲು ವಿಳಂಬವಾಗುತ್ತಿದೆ. ಪಕ್ಷದ ಕಾರ್ಯಕರ್ತರು ಪಕ್ಷವನ್ನು ಸಂಘಟಿಸುವಲ್ಲಿ ನಾಯರೊಂದಿಗೆ ಕೈಜೋಡಿಸುವುದಲ್ಲದೇ, ತಮ್ಮ ತಮ್ಮ ಊರಿನ ಪ್ರತಿ ಮನೆಗೂ ತೆರಳಿ ಜನರ ಕಷ್ಟವನ್ನು ಆಲಿಸುವ ಪ್ರವೃತ್ತಿ ಬೆಳೆಸಿಕೊಂಡು ಜನಸೇವೆಯಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಮಾತನಾಡಿ ಜನರಿಗೆ ಅನುಕೂಲವಾಗುವ ದೃಷ್ಠಿಯಲ್ಲಿ ತೆರೆಯಲಾಗಿರುವ ಬಾಪುಜಿ ಸೇವಾ ಕೇಂದ್ರದಿಂದ ಹಲವು ಸರಕಾರಿ ಸೇವೆಗಳು ಗ್ರಾಮ ಪಂಚಾಯತಿಯಲ್ಲಿಯೇ ದೊರೆಯಲಿದೆ. ಕುಮ್ಕಿ ಹಕ್ಕು, 94ಸಿ ಮುಂತಾದವುಗಳ ಫಲಾನುಭವಿಗಳಿಗೂ ಶೀಘ್ರ ಹಕ್ಕುಪತ್ರ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದ ಅವರು ಕ್ಷೇತ್ರದ ಅಭಿವೃದ್ಧಿಯೊಂದಿಗೆ ಮುಂದಿನ ದಿನದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದರು.

ಕೆಪಿಸಿಸಿ ಸದಸ್ಯರುಗಳಾದ ರಘುರಾಮ ಶೆಟ್ಟಿ, ಆಲೂರು ಮಂಜಯ್ಯ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಗೌರಿ ದೇವಾಡಿಗ, ಜ್ಯೋತಿ ನಾಯ್ಕ್, ಕಾಂಗ್ರೆಸ್ ಮುಖಂಡರುಗಳಾದ ವಾಸುದೇವ ಯಡಿಯಾಳ್, ಮದನಕುಮಾರ್, ರಿಯಾಜ್ ಅಹಮ್ಮದ್, ಎನ್‌ಎಸ್‌ಯುಐ ಅಧ್ಯಕ್ಷ ಸುಬ್ರಹ್ಮಣ್ಯ ಕಾಲ್ತೋಡು ಮೊದಲಾದವರು ಉಪಸ್ಥಿತಿರದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಂಡ್ಸೆ ಬ್ಲಾಕ್ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ ಸ್ವಾಗತಿಸಿದರು. ನ್ಯಾಯವಾದಿ ಪ್ರಸನ್ನಕುಮಾರ್ ನಿರೂಪಿಸಿದರು.

Click here

Click here

Click here

Click Here

Call us

Call us

Byndoor, vandse block congress honored Minister Pramod madwaraj (3) Byndoor, vandse block congress honored Minister Pramod madwaraj (4) Byndoor, vandse block congress honored Minister Pramod madwaraj (5) Byndoor, vandse block congress honored Minister Pramod madwaraj (6)Byndoor, vandse block congress honored Minister Pramod madwaraj (2) Byndoor, vandse block congress honored Minister Pramod madwaraj (6) Byndoor, vandse block congress honored Minister Pramod madwaraj (7) Byndoor, vandse block congress honored Minister Pramod madwaraj (8) Byndoor, vandse block congress honored Minister Pramod madwaraj (9) Byndoor, vandse block congress honored Minister Pramod madwaraj (10)Byndoor, vandse block congress honored Minister Pramod madwaraj (1)

Leave a Reply