ಕುಂದಾಪುರ: ಬಗ್ವಾಡಿಯ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಸಹಸ್ರಾರು ಜನ ಭಕ್ತವೃಂದವರು ರಥೋತ್ಸವದ ದೃಶ್ಯಾವಳಿಗಳನ್ನು ಕಣ್ತುಂಬಿಕೊಂಡರು. ರಥೋತ್ಸವದ ಅಂಗವಾಗಿ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.
ಮಹಿಷಮರ್ದಿನಿ ದೇವರ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಮೊಗವೀರ ಸಮುದಾಯದ ಇಷ್ಟದೇವರಾದ ಬಗ್ವಾಡಿ ದೇವಸ್ಥಾನಕ್ಕೆ ದೂರದ ಮುಂಬೈ, ಬೆಂಗಳೂರು ಮುಂತಾದ ನಗರಗಳಿಂದ ಭಕ್ತರು ತಪ್ಪದೇ ಭೇಟಿ ನೀಡುತ್ತಾರೆ.