ಕಾಲ್ತೋಡು ಗ್ರಾಪಂ ಅಧ್ಯಕ್ಷರಾಗಿ ಭಟ್ನಾಡಿ ಅಣ್ಣಪ್ಪ ಶೆಟ್ಟಿ ಆಯ್ಕೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು ವ್ಯಾಪ್ತಿ ಪ್ರದೇಶವನ್ನು ಹೊಂದಿದ ಕಾಲ್ತೋಡು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಇಲ್ಲಿನ ಗ್ರಾಮಸ್ಥರ ಸಮಸ್ತ ಸಮಸ್ಯೆಗಳ ಪರಿಹಾರಕ್ಕಾಗಿ ನನ್ನ ಅಧಿಕಾರದ ಚೌಕಟ್ಟಿನಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಭಟ್ನಾಡಿ ಅಣ್ಣಪ್ಪ ಶೆಟ್ಟಿ ಹೇಳಿದರು.

Call us

Click Here

ಗ್ರಾಪಂ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಕಚೇರಿಯಲ್ಲಿ ಮಾತನಾಡಿದರು. ಗುಡ್ಡಗಾಡು ಪ್ರದೇಶವೇ ಹೆಚ್ಚಾಗಿರುವ ನಮ್ಮ ಗ್ರಾಮದಲ್ಲಿ ಪ್ರಮುಖವಾಗಿ ವಿದ್ಯುತ್ ಸಂಪರ್ಕ, ಕಾಲುಸಂಕಗಳಿಗೆ ಶೀಘ್ರವಾಗಿ ಕಾಯಕಲ್ಪ ನೀಡಬೇಕಾಗಿದೆ. ಅಲ್ಲದೇ ಸಂಪೂರ್ಣ ಹಾಳಾಗಿರುವ ಕೂಡು ರಸ್ತೆ ಮತ್ತು ವಾರ್ಡ್ ರಸ್ತೆಗಳ ದುರಸ್ತಿ ಕಾರ್ಯವನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು. ಸ್ಥಳೀಯ ಶಾಸಕರು, ಜಿಪಂ, ತಾಪಂ ಸದಸ್ಯರು ಇದಕ್ಕಾಗಿ ನೆರವು ನೀಡುವ ಭರವಸೆ ನೀಡಿದ್ದು, ಅವರಲ್ಲರೊಂದಿಗೆ ಸೇರಿ ಅತ್ಯಂತ ಮುತುವರ್ಜಿವಹಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಬೇಸಿಗೆಯಲ್ಲಿ ಗ್ರಾಮದ ಕೆಲವು ವಾಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಅದಕ್ಕೂ ಕೂಡಾ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿಗಳಲ್ಲಿ ಗ್ರಾಮದ ವ್ಯಾಪ್ತಿಯಲ್ಲಿನ ಕನ್ನಡ ಶಾಲೆಗಳನ್ನು ಉಳಿಸುವ ಬಗ್ಗೆ ಅಭಿಯಾನ ನಡೆಸಲಾಗುವುದು ಎಂದರು.

ಒಟ್ಟು ೧೩ ಸದಸ್ಯರ ಗ್ರಾಪಂನಲ್ಲಿ 11 ಕಾಂಗ್ರೆಸ್ ಬೆಂಬಲಿತ ಹಾಗೂ 2 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ನಿರ್ಗಮಿತ ಅಧ್ಯಕ್ಷ ಮಾದಯ್ಯ ಶೆಟ್ಟಿ ತಮ್ಮ ಇಳಿವಯಸ್ಸಿನ ಕಾರಣದಿಂದ ಪದತ್ಯಾಗ ಮಾಡಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಹಿಂದೆ ಉಪಾಧ್ಯಕ್ಷರಾಗಿರುವ ಬಿ. ಅಣ್ಣಪ್ಪ ಶೆಟ್ಟಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇವರ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ನೆಲೆಯಲ್ಲಿ ಗೊತ್ತುಪಡಿಸಿದ ಚುನಾವಣಾಧಿಕಾರಿ ತಹಶೀಲ್ದಾರ್ ಕಿರಣ್.ಜಿ.ಗೌರಯ್ಯ, ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರ ಹೆಸರನ್ನು ಘೋಷಿಸಿದರು. ವಿಷಯ ನಿರ್ವಹಣಾ ಸಿಬ್ಬಂದಿ ಮಹೇಶ್ ಕುಮಾರ್ ಈ ಸಂದರ್ಭ ಹಾಜರಿದ್ದರು.

ನೂತನ ಅಧ್ಯಕ್ಷರಿಗೆ ಹಿರಿಯರಾದ ನಾರಾಯಣ ಶೆಟ್ಟಿ, ತಾಪಂ ಸದಸ್ಯ ಎಚ್. ವಿಜಯ್ ಶೆಟ್ಟಿ, ನಿರ್ಗಮಿತ ಅಧ್ಯಕ್ಷ ಮಾದಯ್ಯ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಸತೀಶ್ ತೋಳಾರ್, ಗ್ರಾಪಂ ಸದಸ್ಯರು, ಕಚೇರಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಮತ್ತು ಅಭಿಮಾನಿಗಳು ಅಭಿನಂದಿಸಿ ಶುಭಕೋರಿದರು.

Leave a Reply