ಕುಂದಾಪುರ: ಕುಟುಂಬದ ವಿರೋಧದ ನಡುವೆ ಪ್ರೇಮಿಸಿ ಮದುವೆಯಾದ ಜೋಡಿಗೆ ಪೊಲೀಸರ ರಕ್ಷಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕಳೆದ ಕೆಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಹುಡುಗಿಯ ಮನೆಯವರು ಹಾಗೂ ಮಾಜಿ ಪ್ರಿಯಕರನ ವಿರೋಧದ ನಡುವೆಯೇ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದು, ತಮಗೆ ರಕ್ಷಣೆ ನೀಡುವಂತೆ ಕೋರಿ ಕುಂದಾಪುರ ಠಾಣೆಗೆ ತೆರಳಿದ್ದ ಜೋಡಿಗಳಿಗೆ ಕುಟುಂಬದೊಂದಿಗೆ ರಾಜಿ ಸಂಧಾನ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಿದ ಘಟನೆ ಕುಂದಾಪುರ ಠಾಣೆಯಲ್ಲಿ ನಡೆದಿದೆ.

Call us

Click Here

ಕುಂದಾಪುರ ಮೂಡ್ಲಕಟ್ಟೆ ನಿವಾಸಿ, ಲಾರಿ ಚಾಲಕ ಪ್ರಶಾಂತ್ (25) ಹಾಗೂ ಕಾವ್ರಾಡಿಯ ಬಿಬಿಎಂ ಪದವೀಧರೆ ದಿವ್ಯಾಶಾಂತಿ (22) ಪರಸ್ಪರ ಪ್ರೀತಿಸುತ್ತಿದ್ದರು. ಒಂದೇ ಜಾತಿಯವರಾದರೂ ಪ್ರೀತಿಸಿ ಮದುವೆಯಾಗುವ ವಿಷಯ ತಿಳಿದಾಗ ಹುಡುಗಿಯ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಕೆಲವು ದಿನಗಳ ವರೆಗೆ ಕಾದು ಮನೆಯವರು ಒಪ್ಪದಿದ್ದಾಗ ಅ.14ರಂದು ಶಂಕರನಾರಾಯಣದ ದೇವಾಲಯಕ್ಕೆ ತೆರಳಿ ವಿವಾಹವಾಗಿದ್ದರು. ಹುಡುಗಿ ಮನೆಯವರ ವಿರೋಧ ಇದ್ದುದರಿಂದ ಪ್ರೇಮಗಳು ತಮಗೆ ರಕ್ಷಣೆ ನೀಡುವಂತೆ ಅಲ್ಲಿಂದ ಸೀದಾ ಕುಂದಾಪುರ ಪೊಲೀಸ್ ಠಾಣೆಗೆ ತೆರಳಿದ್ದರು. ಠಾಣಾಧಿಕಾರಿ ನಾಸಿರ್ ಹುಸೇನ್ ಎರಡೂ ಕುಟುಂಬದವರನ್ನು ಕರೆಯಿಸಿ ಅವರ ಮನವೊಲಿಸಿದ್ದು, ಪ್ರೇಮಿಗಳನ್ನು ಮನೆಗೆ ಕಳುಹಿಸಿದ್ದಾರೆ.

ಈ ನಡುವೆ ಹುಡುಗಿಯ ಮಾಜಿ ಪ್ರೇಮಿಯೊಬ್ಬ ನಾವಿಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಆದರೆ ಆಕೆ ತನಗೆ ಕೈಕೊಟ್ಟು ಬೇರೊಬ್ಬನೊಂದಿಗೆ ವಿವಾಹವಾಗಿದ್ದಾಳೆ ಎಂದೂ ಪೊಲೀಸರ ಬಳಿ ದೂರಿಕೊಂಡಿದ್ದು, ಹುಡುಗಿಯ ತೀರ್ಮಾನವೇ ಅಂತಿಮವಾಗಿದ್ದರಿಂದ ಮಾಜಿ ಪ್ರೇಮಿ ಬಂದದಾರಿಗೆ ಸುಂಕವಿಲ್ಲವೆಂಬಂತೆ ಹಿಂತಿರುಗಿದ್ದಾನೆ.

* ನಾವು ಮದುವೆಯಾಗಿರುವುದಕ್ಕೆ ನಮ್ಮ ಮನೆಯವರ ವಿರೋಧವಿದೆ ಎಂದು ಪ್ರೇಮಿಗಳು ಠಾಣೆಗೆ ಬಂದಿದ್ದರು. ಹಾಗಾಗಿ ಎರಡೂ ಕುಟುಂಬದವರನ್ನು ಕರೆದು ರಾಜಿ ಮಾಡಲಾಗಿದೆ. ಅವರಿಗೆ ಮಂಗಳವಾರ ಕುಂದಾಪುರದ ರಿಜಿಸ್ಟಾರ್ ಆಫೀಸ್‌ನಲ್ಲಿ ಕಾನೂನುಬದ್ಧವಾಗಿ ವಿವಾಹ ನೊಂದಣಿ ಮಾಡಿಸಿಕೊಳ್ಳಲು ತಿಳಿಸಿದ್ದೇನೆ. – ನಾಸಿರ್ ಹುಸೇನ್, ಕುಂದಾಪುರ ಠಾಣಾಧಿಕಾರಿ

Leave a Reply