ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬಿಟ್ಟುಹೋಗಿದ್ದ ವ್ಯಾನಿಟಿ ಬ್ಯಾಗ್ ಸಹಿತ ಹಣ ಹಾಗೂ ಬಂಗಾರ ಹಿಂದಿರಿಗಿಸುವ ಮೂಲಕ ಕುಂದಾಪುರದ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ.
ಕುಂದಾಪುರ ಖಾರ್ವಿಕೇರಿ ನಿವಾಸಿ ಆಟೋರಿಕ್ಷಾ ಚಾಲಕ ವಿಘ್ನೇಶ್ ನಾಯ್ಕ್ ಆಟೋದಲ್ಲಿ ದೊರೆತ ವಸ್ತುಗಳನ್ನು ಮರಳಿಸಿದ ಚಾಲಕ. ಶನಿವಾರ ಬಸ್ರೂರು ನಿವಾಸಿ ಆಸ್ಮಾ ತನ್ನ ಗಂಡ ಮಕ್ಕಳೊಂದಿಗೆ, ವಿಘ್ನೇಶ್ ಖಾರ್ವಿ ಅವರ ಆಟೋದಲ್ಲಿ ತೆರಳಿದ್ದಾಗ ತನ್ನ ವೆನಿಟ್ ಬ್ಯಾಗ್ ಅಲ್ಲಿಯೇ ಬಿಟ್ಟು ಇಳಿದಿದ್ದರು. ಬ್ಯಾಗ್‌ನಲ್ಲಿ ೫.೬ ಪವನ್ ಚಿನ್ನದ ತಾಳಿ, ಮೊಬೈಲ್ ಹಾಗೂ ಸಾವಿರ ರೂ ನಗದಿತ್ತು.
ಭಾನುವಾರ ಕುಂದಾಪುರ ಠಾಣೆಗೆ ದೂರು ನೀಡಲು ಬಂದ ಆಸ್ಮಾಗೆ ಅಚ್ಚರಿ ಕಾದಿತ್ತು. ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೈನ್ ಅವರಿಗೆ ವಿಘ್ನೇಶ್ ನಾಯ್ಕ್ ಆಟೋದಲ್ಲಿ ಬಿಟ್ಟುಹೋದ ವಸ್ತುಗಳ ಬಗ್ಗೆ ಮಾಹಿತಿ ನೀಡಿದ್ದು, ಹಿಂದಿರುಗಿಸಲು ಸಹಾಯ ಕೇಳಿದ್ದ. ಆಸ್ಮ ಠಾಣೆಗೆ ಬಂದಿದ್ದರಿಂದ ವಿಘ್ನೇಶ್ ಅವರನ್ನು ಠಾಣೆಗೆ ಕರೆಯಿಸಿ, ಕಳೆದುಕೊಂಡ ವಸ್ತು ಮರಳಿಸಲಾಗಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ./