ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡದಲ್ಲಿ ಜನಪ್ರಿಯವಾಗಿ ಮನ್ನಣೆ ಪಡೆದ ಭಾವಗೀತೆಗಳನ್ನು ಬಿಟ್ಟು, ವಿಶೇಷವಾಗಿ ಕೆ.ವಿ. ತಿರುಮಲೇಶ, ಬೇಂದ್ರೆಯವರ ಅತ್ಯಂತ ಅರ್ಥ ಸಾಧ್ಯತೆ ಹೊಮ್ಮಿಸುವ ಹಾಡುಗಳನ್ನು ಆಯ್ಕೆ ಮಾಡಿ ಭಿನ್ನ ರೀತಿಯಲ್ಲಿ ಸೃಜನಶೀಲ ಚಿಂತಕ, ಲೇಖಕ ಶ್ರೀ ಗುರುರಾಜ ಮಾರ್ಪಳ್ಳಿ ಹಾಡಿದರು. ಅವರ ಜೊತೆ ಸಹ ಕಲಾವಿದರಾದ ಶ್ರೀ ಗಣೇಶ್ ರಾವ್ ಎಲ್ಲೂರು, ವಿದ್ಯಾರ್ಥಿ ಚಿನ್ಮಯಿ ಸಹಕರಿಸಿದರು.
ಅವರು ಕಾಲೇಜಿನ ನೂತನ ಸಭಾಂಗಣದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ನಡೆದ ಭಾವಗಾನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಹಾಡಿದರು. ವೇದಿಕೆಯ ಸಂಯೋಜಕ ಮತ್ತು ಪ್ರಭಾರ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರು ಮತ್ತು ಪ್ರಭಾರ ಪ್ರಾಂಶುಪಾಲರಾದ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಸಹಸಂಯೋಜಕಿ ರೇಷ್ಮಾ ಶೆಟ್ಟಿ ಸ್ವಾಗತಿಸಿದರು. ಶ್ರೀಕರ ಅತಿಥಿಗಳನ್ನು ಪರಿಚಯಿಸಿದರು, ರಕ್ಷಾ ವಂದಿಸಿದರು, ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.