ದೇಶ ಸೇವೆಗೆ ಸದಾ ಸಿದ್ದರಿರಬೇಕು: ನಿವೃತ್ತ ಯೋಧ ಜಾನ್ಸಿ ಥೋಮಸ್
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶಭಕ್ತಿ ಹಾಗೂ ಕಠಿಣ ಪರಿಶ್ರಮದಿಂದ ನಮ್ಮ ಸೈನಿಕರು ಗಡಿ ಕಾಯುತ್ತಿದ್ದಾರೆ. ವಿದ್ಯಾರ್ಥಿಗಳು ಸೈನಿಕರ ತ್ಯಾಗ ಬಲಿದಾನಗಳನ್ನು ಅರಿತು ಸದಾ ದೇಶಸೇವೆಗೆ ಸಿದ್ದರಿರಬೇಕು. ಎಂದು ನಿವೃತ್ತ ಯೋಧ ಜಾನ್ಸಿ ಥೋಮಸ್ ಹೇಳಿದರು.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು, ರೋಟರಿ ಕ್ಲಬ್ ಬೈಂದೂರು ಹಾಗೂ ಕಸಾಪ ಬೈಂದೂರು ಹೋಬಳಿ ಘಟಕದ ಸಹಯೋಗದಲ್ಲಿ ಮಾದರಿ ಶಾಲೆಯಲ್ಲಿ ಜರುಗಿದ 70ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಶಾನುಭೋಗ್ ಧ್ವಜಾರೋಹಣ ನೆರವೇರಿಸಿದರು. ರೋಟರಿ ಬೈಂದೂರು ಅಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜೊತೆ ಕಾರ್ಯದರ್ಶಿ ಯು. ಗೋಪಾಲ ಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ದಿನಕರ ಎಚ್., ರಿಕ್ಷಾ, ಟೆಂಪೋ, ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಮಹಾಬಲ ದೇವಾಡಿಗ, ಇನ್ನರ್ ವೀಲ್ ಬೈಂದೂರು ಅಧ್ಯಕ್ಷೆ ಆಶಾ ಕಿಶೋರ್, ಉಪಸ್ಥಿತರಿದ್ದರು.
ರಿಕ್ಷಾ, ಟೆಂಪೋ, ಟ್ಯಾಕ್ಸಿ ಯೂನಿಯನ್‌ನಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ನಿವೃತ್ತ ಯೋಧರಾದ ಜಾನ್ಸಿ ಥೋಮಸ್, ಗಣಪತಿ ಗೌಡ ಹಾಗೂ ಚಂದ್ರಶೇಖರ ನಾವಡ ಅವರನ್ನು ಸನ್ಮಾನಿಸಲಾಯಿತು. ವಿದ್ಯರ್ಥಿಗಳಿಂದ ವಿಶೇಷ ನೃತ್ಯ ಜರುಗಿತು.
ಶಾಲಾ ಮುಖ್ಯೋಪಧ್ಯಾಯ ಜನಾರ್ಧನ್ ಸ್ವಾಗತಿಸಿದರು. ನಿವೃತ್ತ ಮುಖ್ಯೋಪಧ್ಯಾಯ ಕೃಷ್ಣಪ್ಪ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ನಾರಾಯಣ ದೇವಾಡಿಗ ವಂದಿಸಿದರು. ಕಸಾಪ ಬೈಂದೂರು ಹೋಬಳಿ ಅಧ್ಯಕ್ಷ ಗಣಪತಿ ಹೋಬಳಿದಾರ್ ನಿರೂಪಿಸಿದರು.