ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಒಂದು ಪಕ್ಷಕ್ಕೆ ಸಂಬಂಧಸಿದಲ್ಲ. ಇದು ದೇಶವಾಸಿಗಳಿಗೆ ಸಂಬಂಧಿಸಿದ್ದು. ದೇಶ ಪ್ರೇಮಿಗಳು ದೇಶದ ಹಾಗೂ ಸೈನಿಕ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ಪ್ರತಿಭಟನೆ ನಡೆಸಬೇಕು. ದೇಶದ ಭದ್ರತೆ ಸಾರ್ವಭೌಮತೆ ಹಾಗೂ ಸೈನಿಕರ ಮನೋಸ್ಥೈಯ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರತಿಭಟನೆಗೆ ಮುಂದಾಗಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಹಿನ್ನೆಲೆಯಲ್ಲಿ ದೇಶದ ವಿರುದ್ಧ ಕೂಗವವರಿಗೆ ಕ್ಷಮೆಯಿಲ್ಲ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ ಹೇಳಿದರು.
ಕುಂದಾಪುರ ಕ್ಷೇತ್ರ ಬಿಜೆಪಿ ಆಶ್ರಯದಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಂದಾಪುರ ತಾಪಂ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ ಮಾತನಾಡಿ, ಬಲಾತ್ಕಾರದ ಮಂತಾಂತರ ಅಪಾದನೆಗೆ ಒಳಗಾಗಿ, ದೇಶ ವಿರೋಧಿ ಕೆಲಸ ವಾಡುತ್ತಾ ಬಂದಿರುವ ಅಮ್ನೇಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಗೆ ನಿಷೇಧ ಹೇರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಹಿನ್ನೆಲೆಯಲ್ಲಿ ಸೈನಿಕ ಹಾಗೂ ದೇಶ ದ್ರೋಹಿ ಘೋಷಣೆ ಕೂಗಿದದ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಮ್ನೇಸ್ಟಿ ಸಂಸ್ಥೆ ಪ್ರಕರಣ ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು. ಶಾಂತಿಯುತ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿ ಪರಿಷತ್ ಹೋರಾಟ ಹತ್ತಿಕ್ಕಲು ರಾಜ್ಯ ಸರಕಾರ ಲಾಠಿ ಪ್ರಯೋಗಕ್ಕೆ ಮುಂದಾಗಿದೆ. ಅಮ್ನೇಸ್ಟಿ ಸಂಸ್ಥೆ ವಿರುದ್ಧ ಕ್ರಮ ಕೂಗೊಳ್ಳುವ ಜೊತೆ ದೇಶದ್ರೋಹಿ ಘೋಷಣೆ ಕೂಗಿದವರ ಬಂಧಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ, ಜಿಲ್ಲಾ ಬಿಜೆಪಿ ಹಿಂದೂಳಿದ ವರ್ಗಗಳ ಅಧ್ಯಕ್ಷ ರಾಜೇಶ್ ಕಾವೇರಿ, ಮಾಜಿ ಜಿಪಂ ಉಪಾಧ್ಯಕ್ಷ ಪ್ರಕಾಶ್ ಮೆಂಡನ್, ಕುಂದಾಪುರ ಪುರಸಭೆ ಸದಸ್ಯರಾದ ಸತೀಶ್ ಶೆಟ್ಟಿ, ವಿಜಯ ಪೂಜಾರಿ, ಕುಂದಾಪುರ ಬಿಜೆಪಿ ಉಸ್ತುವಾರಿ ಸಂಧ್ಯಾ ರಮೇಶ್, ಕುಂದಾಪುರ ಮಂಡಲ ಬಿಜೆಪಿ ಪ್ರಧಾನ ಕಾರ‍್ಯದರ್ಶಿ ಶಂಕರ ಅಂಕದಕಟ್ಟೆ, ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ಜಾನಕಿ ಬಿಲ್ಲವ, ಯುವ ಮೋರ್ಚಾ ಅಧ್ಯಕ್ಷ ಸತೀಶ್ ಪೂಜಾರಿ, ಕಾರ‍್ಯದರ್ಶಿ ಪ್ರದೀಪ್ ಸಂಗಮ್, ಮೀನುಗಾರಿಕಾ ಪ್ರಕೋಷ್ಠ ಮಾಜಿ ಸಂಚಾಕ ಕಿಶೋರ್ ಕುಮಾರ್, ಮೀನುಗಾರಿಕಾ ಪ್ರಕೋಷ್ಠ ಜಿಲ್ಲಾ ಸಂಚಾಕ ಸದಾನಂದ ಬಳ್ಕೂರು, ಕುಂದಾಪುರ ಬಿಜೆಪಿ ಪ್ರಧಾನ ಕಾರ‍್ಯದರ್ಶಿ ಭಾಸ್ಕರ ಬಿಲ್ಲವ ಇದ್ದರು.
► ಬೈಂದೂರು: ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ – http://kundapraa.com/?p=16888.