ಬೈಂದೂರಿನಲ್ಲಿಗ ಅತ್ಯಾಧುನಿಕ ಹವಾನಿಯಂತ್ರಿತ ಹೈಪರ್ ಮಾರ್ಕೆಟ್ ‘ನಮ್ಮ ಬಜಾರ್’

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ನಿಸರ್ಗದತ್ತ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಬೈಂದೂರು ವಿವಿಧ ಸ್ತರಗಳಲ್ಲಿ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ಈ ಪುಟ್ಟ ನಗರ, ಮೂಲಭೂತ ಸೌಕರ್ಯಗಳನ್ನು ಒಂದೊಂದಾಗಿ ಒಳಗೊಳ್ಳುತ್ತಲೇ ತಾಲೂಕು ಕೇಂದ್ರದ ಕನಸಿಗೆ ಪುಷ್ಠಿ ನೀಡುತ್ತಿದೆ. ಜನರ ಜೀವನ ಮಟ್ಟಕ್ಕೆ ಸುಧಾರಿಸುತ್ತಿದ್ದಂತೆ ನಗರ ಪ್ರದೇಶದಲ್ಲಿ ದೊರೆಯಬಹುದಾದ ಸೇವೆಗಳನ್ನು ಗ್ರಾಮೀಣ ಭಾಗದಲ್ಲಿಯೂ ವಿಸ್ತರಿಸಿಕೊಳ್ಳುತ್ತಾ ಸುಂದರ ಬದುಕನ್ನು ಮತ್ತಷ್ಟು ಸರಳಗೊಳಿಸುತ್ತಿವೆ.

Call us

Click Here

ಶ್ರೀ ಮೂಕಾಂಬಿಕಾ ಡೆವಲಪರ್ಸ್ ಬೈಂದೂರು ಮತ್ತು ಮೆ. ವೃಂದಾ ಮಾರ್ಕೆಂಟಿಂಗ್ ಎಂಟರ್‌ಪ್ರೈಸಸ್ ಅವರಿಂದ ಬೈಂದೂರಿನ ಕೇಂದ್ರಭಾಗದಲ್ಲಿ ನೂತನವಾಗಿ ವಿಶಾಲವಾದ ಸಿಟಿ ಪಾಯಿಂಟ್ ಎದ್ದು ನಿಲ್ಲುವುದರ ಜೊತೆಯಲ್ಲಿಯೇ ವಿಶೇಷ ಪರಿಕಲ್ಪನೆಯೊಂದಿಗೆ ಆರಂಭಿಸಿರುವ ‘ನಮ್ಮ ಬಜಾರ್’ ಎಂಬ ಅತ್ಯಾಧುನಿಕ ಹವಾನಿಯಂತ್ರಿತ ಹೈಪರ್ ಮಾರ್ಕೆಟ್ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಶಾಪಿಂಗ್ ಮಾಡಲು ನಗರ ಪ್ರದೇಶಗಳಿಗೆ ತೆರಳಬೇಕೆಂಬ ಕೊರಗು ದೂರವಾಗಿ ಬೈಂದೂರಿನ ಒಂದೇ ಸೂರಿನಲ್ಲಿಯೇ ಸಾವಿರಾರು ಉತ್ಪನ್ನಗಳು ಗ್ರಾಹಕರಿಗೆ ದೊರೆಯಲಿದೆ. ಕುಂದಾಪ್ರ ಡಾಟ್ ಕಾಂ.

ತಾಲೂಕಿನಲ್ಲಿಯೇ ಮೊದಲು:
ದೊಡ್ಡ ದೊಡ್ಡ ನಗರಗಳಲ್ಲಷ್ಟೇ ಕಾಣಬಹುದಾದ ಶಾಪಿಂಗ್ ಮಾಲ್ ಈಗ ನಮ್ಮ ಬೈಂದೂರಿಗೂ ವಿಸ್ತರಿಸಿಕೊಂಡಿದೆ. ಅತ್ಯಾಧುನಿಕ ಹವಾನಿಂತ್ರಿತ ಮಾರುಕಟ್ಟೆಯಲ್ಲಿ ಗ್ರಾಹಕನಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವುದಲ್ಲದೇ ಒಂದು ಸಂತೋಷದ ಶಾಪಿಂಗ್ ಅನುಭವ ನೀಡಲಿದೆ. ಸುಮಾರು 5,000ಚದರ ಅಡಿ ವಿಸ್ತೀರ್ಣದ ವಿಶಾಲ ಕಟ್ಟದದಲ್ಲಿ ಗ್ರಾಹಕರ ಆಯ್ಕೆಗೆ ತಕ್ಕಂತೆ ಭಿನ್ನ ಭಿನ್ನ ಉತ್ಪನ್ನಗಳು ಸ್ವರ್ಧಾತ್ಮಕ ದರದಲ್ಲಿ ಒಂದೇ ಸೂರಿನಡಿಯಲ್ಲಿ ಇನ್ನು ಮುಂದೆ ದೊರೆಯಲಿದೆ. ಬೈಂದೂರಿನ ಮುಖ್ಯರಸ್ತೆಯ ಇಕ್ಕೆಲದಲ್ಲಿಯೇ ಇರುವ ಕಟ್ಟಡಕ್ಕೆ ವಿನೂತನ ಸೌಲಭ್ಯಗಳನ್ನು ಒಳಗೊಂಡಿದೆ. ಗ್ರಾಹಕರಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ.

60,000 ಅಧಿಕ ಉತ್ಪನ್ನಗಳು:
ನಮ್ಮ ಬಜಾರ್‌ನಲ್ಲಿ 60,000 ಅಧಿಕ ಬ್ರಾಂಡೆಂಡ್ ಉತ್ಪನ್ನಗಳು ಕಡಿಮೆ ದರದಲ್ಲಿಯೇ ದೊರೆಯಲಿದ್ದು, ಕೊಳ್ಳುವವರಿಗೆ ಹಲವು ಆಯ್ಕೆಗಳಿವೆ. ಗ್ರಾಹಕರಿಗೆ ಗ್ರೋಸರಿ, ಸ್ಟೇಷನರಿ, ಫ್ಯಾನ್ಸಿ, ಕಾಸ್ಮೆಟಿಕ್ಸ್, ಟೆಕ್ಸ್‌ಟೈಲ್ಸ್, ಕ್ಯಾಂಡಿಮೆಂಡ್ಸ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್ ಹೀಗೆ ನೂರಾರು ವಿಭಾಗಳಲ್ಲಿ ಅಗತ್ಯ ವಸ್ತುಗಳು ದೊರೆಯಲಿದೆ. ದಿನದ ೧೨ ಗಂಟೆಗಳ ಕಾಲ ತೆರೆದಿರುವ ಮಾಲ್‌ನಲ್ಲಿ ಗ್ರಾಹಕರಿಗೆ ಶೀಘ್ರ ಸೇವೆಯನ್ನು ಒದಗಿಸಲು ೨೫ಕ್ಕೂ ಹೆಚ್ಚು ಸಿಬ್ಬಂಧಿಗಳಿರಲಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

ಗ್ರಾಹಕರಿಗಾಗಿ ವಿವಿಧ ಸೇವೆಗಳು:
ಗ್ರಾಹಕರನ್ನು ಅನುಕೂಲಕ್ಕಾಗಿ ನಮ್ಮ ಬಜಾರ್ ವಿವಿಧ ಸೇವೆಗಳನ್ನು ಒದಗಿಸಲಿದೆ. ನಿಯಮಿತವಾಗಿ ಖರೀದಿಗೆ ಬರುವ ಗ್ರಾಹಕರಿಗೆ ಮೆಂಬರ್‌ಶಿಪ್ ಕಾರ್ಡ್, ಸಿಲ್ವರ್ ಮೆಂಬರ್‌ಶಿಪ್, ಗೋಲ್ಡನ್ ಮೆಂಬರ್‌ಶಿಪ್ ಹೀಗೆ ಹತ್ತಾರು ಬಗೆಯ ಸೇವೆಗಳು ಗ್ರಾಹಕರಿಗೆ ದೊರೆಯಲಿದೆ. ಪ್ರತಿ ಖರೀದಿಗೂ ಉಡುಗೊರೆ ಮುಂತಾದ ಸೌಲಭ್ಯಗಳೂ ಗ್ರಾಹಕರಿಗೆ ದೊರೆಯಲಿದೆ.

Click here

Click here

Click here

Click Here

Call us

Call us

ಒಟ್ಟಿನಲ್ಲಿ ಬೈಂದೂರಿನಂತಹ ಪ್ರದೇಶದಲ್ಲಿ ಯಾವ ನಗರಗಳಿಗೂ ಕಮ್ಮಿ ಇಲ್ಲದಂತಹ ಒಂದು ಅತ್ಯುತ್ತಮವಾದ, ಅತ್ಯಾಧುನಿಕ ಮಾರ್ಕೆಟ್ ಆರಂಭಿಸಿರುವುದು ಹೆಮ್ಮೆಯ ಸಂಗತಿ. ಈ ಭಾಗದ ಜನರಿಗೆ ಉತ್ಕೃಷ್ಟವಾದ ಸೇವೆಯನ್ನು ಒದಗಿಸಬೇಕು ಎಂಬ ನೆಲೆಯಲ್ಲಿ ಇಂತಹ ದೊಡ್ಡ ಯೋಜನೆಗೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಬೈಂದೂರಿನಲ್ಲಿದ್ದರೆ ಒಮ್ಮೆ ಭೇಟಿ ನೀಡಿ. ನಿಮಗೂ ಇಷ್ಟವಾಗುತ್ತೆ.

ಸೆ.15ರಂದು ಲೋಕಾರ್ಪಣೆ:
ನೂತನ ಸಿಟಿ ಪಾಯಿಂಟ್ ಕಟ್ಟಡ ಹಾಗೂ ಹೈಪರ್ ಮಾರ್ಕೆಟ್ ನಮ್ಮ ಬಜಾರ್ ಸೆ.15ರ ಬೆಳಿಗ್ಗೆ 10ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟನೆಗೊಳಿಸಲಿದ್ದು, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಯಚೂರು ಸಿ.ಎ ಹಾಗೂ ಉದ್ಯಮಿ ಯು ರಾಮಚಂದ್ರ ಪ್ರಭು ಶುಭಶಂಸನೆಗೈಯಲಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

[quote font_size=”15″ bgcolor=”#ffffff” bcolor=”#dd3333″ arrow=”yes”]* ಅಭಿವೃದ್ಧಿಯ ಹಾದಿಯಲ್ಲಿರುವ ಬೈಂದೂರಿನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಗ್ರಾಹಕ ಸ್ನೇಹಿ ‘ನಮ್ಮ ಬಜಾರ್’ ಆರಂಭಿಸುತ್ತಿರುವುದು ಬೈಂದೂರಿಗರಿಗೆ ಹೆಮ್ಮೆ. ಈ ವಿನೂತನ ಯೋಜನೆಯ ಬಗ್ಗೆ ಈಗಾಗಲೇ ಸಾರ್ವಜನಕರಿಗೆ ಪ್ರಶಂಶೆಗಳು ಬರುತ್ತಿದೆ. ಗ್ರಾಮೀಣ ಭಾಗದಲ್ಲಿ ಯಾವ ನಗರಗಳಿಗೂ ಕಡಿಮೆಯಿಲ್ಲದಂತೆ ಸೇವೆಯನ್ನು ನೀಡಲಾಗುತ್ತಿದೆ. ಎಲ್ಲಾ ಉತ್ಪನ್ನಗಳು ಒಂದೇ ಸೂರಿನಲ್ಲಿ, ಗುಣಮಟ್ಟ ಹಾಗೂ ಕಡಿಮೆ ಬೆಲೆಯಲ್ಲಿ ಒದಗಿಸುವ ಗುರಿ ನಮ್ಮದಾಗಿದ್ದು, ಗ್ರಾಹಕರಿಗೂ ಇದು ಹಿಡಿಸುವುದರಲ್ಲಿ ಸಂಶಯವಿಲ್ಲ. – ಕೆ. ವೆಂಕಟೇಶ ಕಿಣಿ, ಪಾಲುದಾರರು ನಮ್ಮ ಬಜಾರ್ – ಸಿಟಿ ಪಾಯಿಂಟ್ ಬೈಂದೂರು[/quote]

namma-bazar-city-point-byndoor3 namma-bazar-city-point-byndoor namma-bazar-city-point-byndoor2 namma-bazar-city-point-byndoor1namma-bazar-city-point-byndoor6 namma-bazar-city-point-byndoor7 namma-bazar-city-point-byndoor5 namma-bazar-city-point-byndoor4

Leave a Reply

Your email address will not be published. Required fields are marked *

1 × two =