ಅಮಾಸೆಬೈಲು: ತಮಿಳುನಾಡಿನಲ್ಲಿ ರಟ್ಟಾಡಿಯ ಯುವಕನ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಅಮಾಸೆಬೈಲು: ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ರಟ್ಟಾಡಿಯ ವಾಹನ ಚಾಲಕ ಮಂಜುನಾಥ ಕುಲಾಲ ಅವರಿಗೆ ತಮಿಳುನಾಡಿನ ರಾಮೇಶ್ವರದಲ್ಲಿ ನಡೆದ ಹಲ್ಲೆಯನ್ನು ಖಂಡಿಸಿ ಮಂಜುನಾಥ ಕುಲಾಲ್‌ ಅವರ ಹುಟ್ಟೂರು ಅಮಾಸೆಬೈಲಿನಲ್ಲಿ ಪ್ರತಿಭಟನೆ ನಡೆಯಿತು.

Call us

Click Here

Click here

Click Here

Call us

Visit Now

Click here

ತಮಿಳುನಾಡಿನಲ್ಲಿರುವ ಇಲ್ಲಿಂದ ಹೋದ ಜನರು ದೈಹಿಕ, ಮಾನಸಿಕವಾಗಿ ನೊಂದಿದ್ದಾರೆ. ತಮಿಳುನಾಡಿನ ಪೊಲೀಸರ ವಶದಲ್ಲಿರುವ ನಮ್ಮವರಿಗೆ ಸೂಕ್ತ ರಕ್ಷಣೆ ಬೇಕಾಗಿದೆ. ಜಖಂಗೊಂಡ ವಾಹನಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರಲ್ಲದೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಧಿಕ್ಕಾರ ಕೂಗಿದರು. ಘಟನೆ ನಡೆದು ಕೆಲವು ಸಮಯ ಕಳೆದರೂ ರಾಜ್ಯ ಸರಕಾರವು ಸೂಕ್ತವಾಗಿ ಸ್ಪ‌ಧಿಂದಿಸುತ್ತಿಲ್ಲ, ಸರಕಾರ ಸಮಸ್ಯೆಯನ್ನು ಗಂಭೀರ‌ವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ಹಲ್ಲೆಗೊಳಗಾದ ಮಂಜುನಾಥ ಕುಲಾಲ ಅವರ ಸಹೋದರ ದಿನೇಶ ಕುಲಾಲ, ಅಮಾಸೆಬೈಲು ಸಿ.ಎ. ಬ್ಯಾಂಕಿನ ಅಧ್ಯಕ್ಷ ಆರ್‌ ನವೀನ್‌ಚಂದ್ರ ಶೆಟ್ಟಿ, ಅಮಾಸೆಬೈಲು, ಗೋಳಿಯಂಗಡಿ, ಸಿದ್ದಾಪುರ, ಹಾಲಾಡಿ, ಬಾಡಿಗೆ ರಿಕ್ಷಾ, ಟ್ಯಾಕ್ಸಿ, ಗೂಡ್ಸ್‌ ವಾಹನ ಮಾಲಕರು ಪ್ರತಿಭಟನೆ ನಡೆಸಿದ್ದರು. ಘಟನೆಯನ್ನು ಖಂಡಿಸಿ ಪೇಟೆಯಲ್ಲಿ ಜಾಥಾ ನಡೆಸಿದರು ಹಾಗೂ ಅಮಾಸೆಬೈಲು ಠಾಣಾ ಉಪನಿರೀಕ್ಷಕ ಸುದರ್ಶನ ಅವರಿಗೆ ಮನವಿ ನೀಡಿದರು.