ಧರ್ಮರಕ್ಷಣೆಯ ಹೆಸರಿನಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ: ದಿನೇಶ್ ಗುಂಡೂರಾವ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಧರ್ಮ ಹಾಗೂ ಗೋರಕ್ಷಣೆಯ ಮುಖವಾಡ ಧರಿಸಿರುವ ಬಿಜೆಪಿ ಪಕ್ಷ ನಿರಂತರವಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಎಂದಿಗೂ ಧರ್ಮ ವಿರೋಧಿ ನಿಲುವನ್ನು ತಳೆದಿಲ್ಲ. ಎಲ್ಲಾ ಜಾತಿ, ಮತ, ಪಂಥದವರನ್ನೂ ಸಮಾನವಾಗಿ ಕಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡುರಾವ್ ಹೇಳಿದರು.

Call us

Click Here

ಬೈಂದೂರು ಯಡ್ತರೆಯ ಜೆ.ಎನ್. ಆರ್ ಕಲಾ ಮಂದಿರದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಹಾಗೂ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿದ್ಧರಾಮಯ್ಯರ ಸರಕಾರದ್ದು ಜನಪರ ಯೋಜನೆ:
ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳಿಂದ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದೆ. ಸರಕಾರ ಈ ವರೆಗೆ ಯಾವುದೇ ಹಗರಣಗಳಿಗೆ ಸಿಲುಕಿಲ್ಲ. ಸರಕಾರಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹೆಚ್ಚು ಕಾಳಜಿ ವಹಿಸಿದ್ದರಿಂದ ಪಕ್ಷದ ಕಾರ್ಯಕ್ರಮಗಳು ಹಿಂದೆ ಬಿದ್ದಿದೆ. ಆದರೆ ಇನ್ನು ಮುಂದೆ ಪಕ್ಷ ಸಂಘಟನೆ ಮತ್ತು ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಯಪಡಿಸುವ ಕೆಲಸದತ್ತ ಗಮನ ಹರಿಸಲಾಗುವುದು ಎಂದರ.

ಕಾಂಗ್ರೆಸ್ ಯೋಜನೆಗೆ ಹೊಸ ಹೆಸರು:
ಬಿಜೆಪಿ ಒಂದು ರೂಪಾಯಿಯ ಕೆಲಸ ಮಾಡಿ ನೂರು ರೂಪಾಯಿಯ ಪ್ರಚಾರ ಪಡೆಯುತ್ತಿದೆ. ಆದರೆ ಕಾಂಗ್ರೆಸ್ ಪ್ರಚಾರದ ಹಿಂದೆ ಬಿದ್ದಿಲ್ಲ. ಕೇಂದ್ರದಲ್ಲಿ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಯೋಜನೆಗಳಿಗೆ ಹೊಸ ಹೆಸರು ನೀಡಿ ತಮ್ಮದೇ ಯೋಜನೆಗಳೆಂಬಂತೆ ಬಿಂಬಿಸಲಾಗುತ್ತಿದೆ ಎಂದ ಅವರು ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪಗಳನ್ನು ಹೆಣೆದು ಜನರ ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿದೆ ಎಂದರು.

ಸ್ವತಂತ್ರ್ಯ ಹೋರಾಟಗಾರನ ಹೆಸರು ಬಿಜೆಪಿಯಿಂದ ದರ್ಬಳಕೆ:
ರಾಜ್ಯ ಬಿಜೆಪಿ ನಾಯಕರುಗಳಲ್ಲಿಯೇ ಹೊಂದಾಣಿಕೆ ಇಲ್ಲದೇ ಕಿತ್ತಾಡುತ್ತಿದ್ದಾರೆ. ಇವರುಗಳ ಮೇಲಾಟಕ್ಕೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಂಗೊಳ್ಳಿ ರಾಯಣ್ಣನ ಹೆಸರು ಬಳಸಿಕೊಂಡು ಅವನನ್ನು ಅವಮಾನಿಸಲಾಗುತ್ತಿದೆ. ಅಧಿಕಾರ ಗಿಟ್ಟಿಸಲು ಯಾವುದಕ್ಕೂ ಹಿಂಜರಿಯದ ಬಿಜೆಪಿ ನಾಯಕರು ಈಗಲೇ ಕಿತ್ತಾಡುತ್ತಿದ್ದಾರೆ, ಇನ್ನು ಅಧಿಕಾರ ಸಿಕ್ಕರೆ ಒಳ್ಳೆಯ ಆಡಳಿತ ನಿರೀಕ್ಷಿಸಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.

Click here

Click here

Click here

Click Here

Call us

Call us

ಪಕ್ಷ ಸಂಘಟನೆಗೆ ಒತ್ತು:
ಕಾಂಗ್ರೆಸ್ ಈಗ ತನ್ನ ವಿರೋಧಿಗಳಿಗೆ ಸಂಘಟನಾತ್ಮಕ ಹೋರಾಟದ ಮೂಲಕ ಉತ್ತರ ನೀಡಬೇಕಾಗಿದೆ. ಅಕ್ಟೋಬರ 2ರಿಂದ ಮುಂದಿನ ಜನವರಿ 30ರ ವರೆಗೆ ರಾಜ್ಯದ ಎಲ್ಲ ಸ್ತರಗಳ ಪಕ್ಷಸಂಘಟನೆಯ ಕೆಲಸ ನಡೆಯಲಿದೆ. ಇದರಲ್ಲಿ ಎಲ್ಲ ಕಾರ್ಯಕರ್ತರು ಭಾಗಿಗಳಾಗಬೇಕು. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೈಜೋಡಿಸಿ ದುಡಿಯಬೇಕು ಎಂದ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಆಸ್ಕರ ಫೆರ್ನಾಂಡಿಸ್, ಕಾಂಗ್ರೆಸ್ ಕುಟುಂಬದ ಎಲ್ಲಾ ಸದಸ್ಯರು ಸಮಾನರು. ನಾಯಕನಾಗಲೀ ಸಾಮಾನ್ಯ ಕಾರ್ಯಕರ್ತನಾಗಿರಲಿ ಎಲ್ಲರೂ ಪಕ್ಷದ ಸಿದ್ದಾಂತಕ್ಕೆ ಬದ್ದರಾಗಿ ಕೆಲಸ ಮಾಡುತ್ತಾರೆ. ಹಲವು ವರ್ಷಗಳ ನಿರಂತರ ಜನಸೇವೆಯಿಂದ ಗುರುತಿಸಿಕೊಂಡವರಿಗೆ ಪಕ್ಷ ಹೆಚ್ಚಿನ ಜವಾಬ್ದಾರಿ ನೀಡುತ್ತದೆ ಎಂದು ಹೇಳಿದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ನಿರ್ಗಮಿತ ಅಧಕ್ಷ ರಮೇಶ್ ಗಾಣಿಗ ಕೊಲ್ಲೂರು ನಿಯೋಜಿತ ಅಧ್ಯಕ್ಷ ಎಸ್. ಮದನ್ ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪಶ್ಚಂದ್ರ ಶೆಟ್ಟಿ, ಶಾಸಕ ಕೆ. ಗೋಪಾಲ ಪೂಜಾರಿ, ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫೂರ್, ಸದಸ್ಯ ಇಸ್ಮಾಯಿಲ್, ಮಹಿಳಾ ಕಾಗ್ರೆಸ್ ಅಧ್ಯಕ್ಷೆ ವರೋನಿಕಾ ಕರ್ನೇಲಿಯೋ, ಸೇವಾದಳ ಅಧ್ಯಕ್ಷ ಅಶೋಕ ಕೊಡವೂರು, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಮುರಳಿ ಶೆಟ್ಟಿ, ಜಿಪಂ ಸದಸ್ಯೆ ಗೌರಿ ದೇವಾಡಿಗ, ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ, ರಾಜ್ಯ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾಮಲ್ಯಾಡಿ ಶಿವರಾಮ ಶೆಟ್ಟಿ, ಎಸ್. ಸಂಜೀವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಈಲ್ಲಾ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿ, ಬೈಂದೂರು ಬ್ಕಾಕ್ ಕಾರ್ಯದರ್ಶಿ ನಾಗರಾಜ ಗಾಣಿಗ ವಂದಿಸಿದರು. ಈಶ್ವರ ದೇವಾಡಿಗ ನಿರೂಪಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಬೈಂದೂರು ಬ್ಲಾಕ್ ವಿವಿಧೆಡೆಗಳಿಂದ 500ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಸಮಾವೇಶದಲ್ಲಿ ಸುಮಾರು 5,000 ಕಾರ್ಯಕರ್ತರು ಭಾಗವಹಿಸಿದ್ದರು.

Read this► ಬೈಂದೂರಿನಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಹಾಗೂ ಕಾರ್ಯಕರ್ತರ ಸಮಾವೇಶ  – http://kundapraa.com/?p=17616

_mg_1141 _mg_1161 _mg_1188 byndoor-block-congress-president-installation-and-congress-members-samavesha-3 byndoor-block-congress-president-installation-and-congress-members-samavesha-4 byndoor-block-congress-president-installation-and-congress-members-samavesha-5 byndoor-block-congress-president-installation-and-congress-members-samavesha-6 byndoor-block-congress-president-installation-and-congress-members-samavesha-7 byndoor-block-congress-president-installation-and-congress-members-samavesha-9 byndoor-block-congress-president-installation-and-congress-members-samavesha-10  byndoor-block-congress-president-installation-and-congress-members-samavesha-11 byndoor-block-congress-president-installation-and-congress-members-samavesha-8byndoor-block-congress-president-installation-and-congress-members-samavesha-12

Leave a Reply