ಕುಂಭಾಶಿ ಕೊರಗ ಕಾಲೋನಿಗೆ ರಾಷ್ಟ್ರೀಯ ಬುಡಕಟ್ಟು ಆಯೋಗದ ಅಧ್ಯಕ್ಷರ ಭೇಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಜಿಲ್ಲಾಧಿಕಾರಿ ನಿರ್ದೇಶನದಂತೆ ರಾಜ್ಯದಲ್ಲಿರುವ ಬುಡಕಟ್ಟು ಜನಾಂಗದವರ ಮೂಲಭೂತ ಸಮಸ್ಯೆ ಹಾಗೂ ಕೇಂದ್ರದ ಅನುದಾನಗಳು ಸಮರ್ಪಕವಾಗಿ ವಿನಿಯೋಗವಾಗುತ್ತಿದೆ ಎನ್ನುವ ಬಗ್ಗೆ ಸ್ವತಃ ಅವರ ಬಳಿಗೆ ಹೋಗಿ ಸಂವಾದ ನಡೆಸುವ ಮೂಲಕ ಕೇಂದ್ರ ಬುಡಕಟ್ಟು ಆಯೋಗ ರಾಜ್ಯಗಳಿಗೆ ವರದಿ ನೀಡಲಿದೆ. ಅಲ್ಲದೆ ಕೊರಗ ಸಮದಾಯದ ಸಮಸ್ಯೆಗಳಿಗೆ ಒಂದು ವಾರದಲ್ಲಿಯೇ ಸ್ಪಂದಿಸಲಿದೆ ಎಂದು ಕೇಂದ್ರ ಸರಕಾರದ ರಾಷ್ಟ್ರೀಯ ಬುಡಕಟ್ಟು ಆಯೋಗದ ಅಧ್ಯಕ್ಷ ಡಾ| ರಾಮೇಶ್ವರ ಓರಾನ್‌ ಭರವಸೆ ನೀಡಿದರು.

Call us

Click Here

ಅವರು ತಾಲೂಕಿನ ಕುಂಭಾಶಿ ಅಂಬೇಡ್ಕರ್‌ ಕಾಲನಿಯಲ್ಲಿರುವ ಮಕ್ಕಳ ಮನೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಇದೇ ಸಂದರ್ಭ ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್‌ ವಿ. ಮನವಿ ಸಲ್ಲಿಸಿ ಮಾತನಾಡಿ, ಕೊರಗರ ಹೊಸ ಮನೆಗಳಿಗೆ ನೀಡುತ್ತಿರುವ ರೂ. 2 ಲಕ್ಷವನ್ನು ರೂ. 4 ಲಕ್ಷಕ್ಕೆ ಏರಿಸಬೇಕು ಹಾಗೂ ಆರೋಗ್ಯ ಶಿಕ್ಷಣ ಮತ್ತು ಸ್ವಉದ್ಯೋಗಗಳಿಗೆ ಕಳೆದ ಎರಡು ವರ್ಷಗಳಿಂದ ಕೇಂದ್ರ ಅನುದಾನ ಬಾರದಿರುವ ಹಿನ್ನೆಲೆಯಲ್ಲಿ ಪರಿಶಿಷ್ಟ ವರ್ಗದವರಿಗೆ ಐಟಿಡಿಪಿ ಇಲಾಖೆಯಿಂದ ಸ್ವ ಉದ್ಯೋಗಕ್ಕಾಗಿ ಶೇ. 90ರಷ್ಟು ಸಬ್ಸಿಡಿ ನೀಡುವುದನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಕುಂಭಾಶಿ ಗ್ರಾ. ಪಂ. ಅಧ್ಯಕ್ಷೆ ಶ್ರೀವಾಣಿ ಅಡಿಗ, ಉಪಾಧ್ಯಕ್ಷ ಮಹಾಬಲೇಶ್ವರ ಆಚಾರ್‌, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಪಿ. ರೇವಣ್ಣಪ್ಪ, ಕೇಂದ್ರ ಸರಕಾರದ ರಾಷ್ಟ್ರೀಯ ಬುಡಕಟ್ಟು ಆಯೋಗದ ಜೊತೆ ಕಾರ್ಯದರ್ಶಿ ಅಶೋಕ್‌ ಪೈ, ಡಿ.ವಿ. ಕೊಕರೇಜ, ಆರ್‌.ಕೆ. ದುಬೆ, ಐಟಿಡಿಪಿ ಅಧಿಕಾರಿ ಹರೀಶ್‌ ಗಾವಂಕರ್‌, ವಿಶ್ವನಾಥ , ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅನುಸೂಯ, ಗ್ರಾ.ಪಂ. ಸದಸ್ಯ ಕಮಲಾಕ್ಷ ಪೈ, ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್‌ ವಿ., ಕೊರಗ ಮುಖಂಡ ಶೇಖರ್‌ ಮರವಂತೆ ಮೊದಲಾದವರು ಉಪಸ್ಥಿತರಿದ್ದರು.

Leave a Reply