ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಾರಂತರು ನಡೆದಾಡಿದ ಮಣ್ಣು ನಾವೇಲ್ಲ ಶೀರೊಧಾರೆ ಮಾಡಿಕೊಳ್ಳುವಷ್ಟು ಪವಿತ್ರವಾದದು. ಅಂತಹ ಕಾರಂತರಿಗಾಗಿ ಕೋಟತಟ್ಟು ಗ್ರಾಮ ಪಂಚಾಯಿತಿಯು ದೇಶದಲ್ಲಿ ಯಾವೋಬ್ಬ ಕವಿಗೂ ಸಿಗದ ಗೌರವವನ್ನು ಥೀಂ ಪಾರ್ಕ ರಚಿಸುವ ಮೂಲಕ ನೀಡಿ ಗೌರವಿಸಿದ್ದಿರಿ. ಇವೆಲ್ಲದರ ಹಿಂದಿನ ಶಕ್ತಿ ಕಾರಂತರ ಶಿಷ್ಯೋತ್ತಮ ಕೋಟ ಶ್ರೀನಿವಾಸ ಪೂಜಾರಿಯವರ ಶ್ರಮವನ್ನು ಬಣ್ಣಿಸಲು ಅಸಾಧ್ಯವಾದದು, ಶಿಷ್ಯನೋರ್ವ ಗುರುವಿಗೆ ನೀಡುವ ಅತ್ಯದ್ಬುತ ಕಾಣಿಕೆಯನ್ನು ನೀಡಿದ್ದಾರೆ ಎಂದು ಸಾಹಿತಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಹೇಳಿದರು.
ಅವರು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಪ್ರತಿಷ್ಠಾನ(ರಿ.) ಕೋಟ, ಡಾ.ಶಿವರಾಮ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಲಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್‌ರಾಜ್ ಮತ್ತು ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಸ್ಪರ್ಧೆ ಹೊಳಪು 2016 ಇದರ ಪ್ರಯುಕ್ತ ನಿರ್ಮಿಸಲಾದ ಸ್ವಾಗತ ಗೋಪುರ, ಕಾರಂತ ಮಹಾದ್ವಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಎ.ಎಸ್.ಎನ್.ಹೆಬ್ಬಾರ್ ಅವರು ಕಾರಂತರ ನ್ಯಾಯವಾದಿಯಾಗಿದ್ದವರು, ಕಾರಂತರೊಂದಿಗಿನ ಒಡನಾಟದಲ್ಲಿ ಒಂದಿಷ್ಟು ಕಾರಂತರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು ಹೆಬ್ಬಾರರು ಎಂದರು. ಕಾರ್ಯಕ್ರಮದಲ್ಲಿ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಪ್ರಮೋದ್ ಹಂದೆ, ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ, ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ, ಕೋಟತಟ್ಟು ಪಂಚಾಯಿತಿ ಸದಸ್ಯರಾದ ವಾಸು ಪೂಜಾರಿ, ಜಯಪ್ರಶಾಶ್, ಸತೀಶ್ ಬಾರಿಕೆರೆ, ಪ್ರತಿಷ್ಠಾನದ ಸದಸ್ಯ ಸುಬ್ರಾಯ ಆಚಾರ್ಯ, ಯಡ್ತಾಡಿ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಸದಸ್ಯ ಅಲ್ತಾರು ಗೌತಮ್ ಹೆಗ್ಡೆ, ಐರೋಡಿ ಪಂಚಾಯಿತಿ ಅಧ್ಯಕ್ಷೆ ಬೇಬಿ ಕೃಷ್ಣ ಸಾಲ್ಯಾನ್, ಅಜಿತ್ ಶೆಟ್ಟಿ ಕೊತ್ತಾಡಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪಾರ್ವತಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.