ಕಂಡ್ಲೂರು ಗ್ರಾಮಾಂತರ ಠಾಣೆಗೆ ಕಟ್‌ಬೆಲ್ತೂರು ಗ್ರಾಮ ಸೇರಿಸದಂತೆ ಮನವಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಕೇಂದ್ರದಿಂದ ಕೇವಲ ೭ಕಿ.ಮೀ ದೂರವಿರುವ ಅನಾದಿ ಕಾಲದಿಂದಲೂ ಎಲ್ಲ ರೀತಿಯ ವ್ಯಾಪಾರ, ಸೌಲಭ್ಯಗಳಿಗೆ ಕುಂದಾಪುರವನ್ನು ಆಶ್ರಯಿಸಿರುವ ಕಟ್‌ಬೆಲ್ತೂರು ಗ್ರಾಮವನ್ನು ೨೦ ಕಿ. ಮೀ ದೂರದಲ್ಲಿರುವ ಯಾವುದೇ ಸಮರ್ಪಕ ಸಾರಿಗೆ ಸೌಲಭ್ಯದ ಅನುಕೂಲವಿಲ್ಲದ ಕಂಡ್ಲೂರು ಗ್ರಾಮಾಂತರ ಆರಕ್ಷಕ ಠಾಣೆ ವ್ಯಾಪ್ತಿಗೆ ಸೇರಿಸಿರುವುದು ಅವೈಜ್ಞಾನಿಕ ಕ್ರಮವೆಂದು ಕಟ್‌ಬೆಲ್ತೂರು ಗ್ರಾಮಸ್ಥರು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

Call us

Click Here

ಕಟ್‌ಬೆಲ್ತೂರು ಗ್ರಾಮವನ್ನು ಕಂಡ್ಲೂರು ಗ್ರಾಮಾಂತರ ಆರಕ್ಷಕ ಠಾಣೆ ವ್ಯಾಪ್ತಿಗೆ ಸೇರಿಸುವ ಯತ್ನ ದೋಷಪೂರಿತವಾಗಿದ್ದು ಮುಂದೊಂದು ದಿನ ಅಪಾಯಕಾರಿಯಾಗಬಲ್ಲದು. ಕಟ್‌ಬೆಲ್ತೂರು ದೈನಂದಿನ ಬೇಕು ಬೇಡಗಳಿಗೆ ಕಾರ್ಯ ಕಲಾಪಗಳಿಗೆ ಕುಂದಾಪುರವನ್ನು ಅವಲಂಭಿಸಿದ್ದು ಎಲ್ಲ ರೀತಿಯಿಂದಲೂ ಅನುಕೂಲದಿಂದ ಕೂಡಿದೆ ಆದರೆ ಇದೀಗ ಏಕಾಏಕಿ ಕಂಡ್ಲೂರು ಠಾಣೆ ವ್ಯಾಪ್ತಿಗೆ ತರುವ ಪ್ರಯತ್ನ ಅಸಂಬದ್ದವಾಗಿದ್ದು ಯಾವುದೇ ಕಾರಣಕ್ಕೂ ಕಂಡ್ಲೂರು ಠಾಣೆ ವ್ಯಾಪ್ತಿಗೆ ಸೇರಿಸುವುದು ಸಾಧುವಲ್ಲ ಈ ಭಾಗದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ ಆದುದರಿಂದ ತಕ್ಷಣ ಈ ಪ್ರಯತ್ನವನ್ನು ಹಿಂಪಡೆಯುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನವಿಯನ್ನು ಶಾಸಕ ಕೆ. ಗೋಪಾಲ ಪೂಜಾರಿಯವರ ಮೂಲಕ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಲಾಯಿತು.

ಹೋರಾಟದ ನೇತೃತ್ವವನ್ನು ವಹಿಸಿರುವ ಗ್ರಾಮಸ್ಥರಾದ ನರಸಿಂಹ ಗಾಣಿಗ, ನ್ಯಾಯವಾದಿ ರಾಘವೇಂದ್ರ ಚರಣ ನಾವಡ, ರವೀಶ, ಚಂದ್ರ ನಾಯ್ಕ್ ಇನ್ನಿತರರು ಉಪಸ್ಥಿತರಿದ್ದರು

Leave a Reply