ಅಂತರಂಗದಿಂದ ಗಟ್ಟಿಯಾದಾಗ ಸಮಾಜದ ಅಭಿವೃದ್ಧಿ ಸಾಧ್ಯ : ಕೇಮಾರು ಶ್ರೀ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾವು ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಉಳಿಸಿ ಬೆಳೆಸಬೇಕಾದರೆ ನಮ್ಮ ಅಂತರಂಗದಿಂದ ಗಟ್ಟಿಯಾಗಬೇಕು. ಟಿ.ವಿ.ಧಾರವಾಹಿಗಳಿಂದ ಇಂದು ನಾವು ಯಾಂತ್ರಿಕ ಸ್ಥಿತಿಯತ್ತ ಹೆಜ್ಜೆ ಇಡುತ್ತಿದ್ದೇವೆ. ನಾವು ಲೌಕಿಕ ಭೋಗದ ಅಮಲಿನಿಂದ ನಮ್ಮ ದೃಷ್ಟಿಕೋನವನ್ನು ಬದಲಿಸುತ್ತಾ ಸಾಗುತ್ತಿರುವುದು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಅಧಃಪತನಕ್ಕೆ ಹಾದಿಯಾಗುವ ಅಪಾಯವಿದೆ ಎಂದು ಸಾಂದೀಪನಿ ಶ್ರೀ ಕೇಮಾರು ಮಠಾಧೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.

Call us

Click Here

ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮ ಪಂಚಾಯಿತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೊಂಜಾಡಿ ಇದರ ಮೂರನೇ ವರ್ಷದ ನವರಾತ್ರಿ ಉತ್ಸವದ ಪ್ರಯುಕ್ತ ದುರ್ಗಾ ಪೂಜೆ, ದುರ್ಗಾ ಹೋಮ, ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮದ ಸಂದರ್ಭ ಆಶೀರ್ವಚನ ಮಾಡುತ್ತಿದ್ದರು.

ಹಿಂದೆ ದೇವಸ್ಥಾನಗಳು ಧಾರ್ಮಿಕ ಗ್ರಂಥಾಲಯಗಳಾಗಿದ್ದವು. ಆದರೆ ಇಂದು ಅಂತಹಾ ಧಾರ್ಮಿಕ ಶಿಕ್ಷಣವನ್ನು ದೇವಸ್ಥಾನಗಳು ಕಡಿಮೆ ಮಾಡುತ್ತಿವೆ. ನಮ್ಮ ಪುರಾಣ ಗ್ರಂಥಗಳ ಅಧ್ಯಯನಗಳು ನಮ್ಮ ಧರ್ಮ ರಕ್ಷಣೆಗೆ ಬಹಳ ಮುಖ್ಯ ಎಂದ ಅವರು, ಕೇವಲ ದೇವಸ್ಥಾನಗಳ ನಿರ್ಮಾಣದಿಂದ ದೇವರನ್ನು ಒಲಿಸಿಕೊಳ್ಳುವುದು ಸಾಧ್ಯವಿಲ್ಲ. ಹಸಿವೆಯಿಂದ ನರಳುತ್ತಿರುವ ಬಡ ಜೀವಗಳನ್ನು, ಶಿಕ್ಷಣ ವಂಚಿತರಾದ ಮಕ್ಕಳಿಗೆ ನೈತಿಕ, ಆಧ್ಯಾತ್ಮಿಕ ಶಿಕ್ಷಣ ನೀಡುವ ಕೆಲಸ ಮಾಡಿದಾಗ ಬದುಕು ಸಾರ್ಥಕವಾಗುತ್ತದೆ ಬಡಜನರ ರಕ್ಷಣೆಗಾಗಿ, ಸಮಾಜದ ಒಳಿತಿಗಾಗಿ ನಾನು ಯಾವತ್ತೂ ನಿಮ್ಮ ಜೊತೆಗೇ ಇರುತ್ತೇನೆ ಎಂದರು.

ನಮ್ಮ ಧರ್ಮದ ಜೊತೆಗೆ ಇತರ ಧರ್ಮಗಳನ್ನು ಗೌರವಿಸಬೇಕು. ನಮ್ಮ ಧರ್ಮವನ್ನೂ ಆಳವಾಗಿ ಅಧ್ಯಯನ ಮಾಡಬೇಕು. ಧರ್ಮ ಎನ್ನುವುದು ನಮ್ಮ ಬೌದ್ಧಿಕ ಬೆಳವಣಿಗೆಗೆ ಪೂರಕವಾದಾಗ ಮಾತ್ರ ನಾವು ಹೆಚ್ಚು ಬೆಳೆಯಲು ಸಾಧ್ಯ ಎಂದು ಕಿವಿ ಮಾತು ಹೇಳಿದ ಸ್ವಾಮೀಜಿ, ನಾವು ಮೊದಲು ಮನುಷ್ಯರಾಗಬೇಕು ಅದಕ್ಕಾಗಿ ಮಾನವೀಯ ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭ ದೇವಳದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸಂಚಾಲಕರು ಮತ್ತು ಅರ್ಚಕರು, ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

Click here

Click here

Click here

Click Here

Call us

Call us

Leave a Reply