ಕುಂದಾಪುರ: ಗೋಪಾಡಿಯಲ್ಲಿ ಮುಸುಕುಧಾರಿ ವ್ಯಕ್ತಿಯಿಂದ ಕಳ್ಳತನಕ್ಕೆ ಯತ್ನ

Click Here

Call us

Call us

Call us

Call us

ಕುಂದಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಗೋಪಾಡಿ ಪರಿಸರದಲ್ಲಿ ಮುಸುಕುಧಾರಿ ಕಳ್ಳನೊಬ್ಬ ಶೋರೂಮ್ ಒಂದರ ಬಾಗಿಲು ಒಡೆಯಲು ಯತ್ನಿಸಿದ ಘಟನೆ ಶನಿವಾರದಂದು ನಡೆದಿದೆ.

Click Here

Call us

Click Here

ಮುಂಜಾನೆ 3 ಗಂಟೆಯ ಹೊತ್ತಿನಲ್ಲಿ ಮುಸುಕುದಾರಿ ವ್ಯಕ್ತಿಯೊಬ್ಬ ಶೋರೂಮ್ ಶೆಟರ್ ಒಡೆಯಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರೊಡನೆ ಕಳ್ಳನಿಗಾಗಿ ಹುಡುಕಾಡಿದ್ದರು.ಕಳ್ಳ ಅಲ್ಲಿಂದ ಪರಾರಿ ಆಗಿದ್ದಾನೆ ಎಂದು ತಿಳಿದುಬಂದಿದೆ.

ಇತ್ತೀಚಿಗೆ ಈ ಪರಿಸರದಲ್ಲಿ ಮುಸುಕುಧಾರಿ ಕಳ್ಳರ ಸಂಚಾರದಿಂದ ಜನರಲ್ಲಿ ನಡುಕ ಹುಟ್ಟಿಸಿದೆ. ಕಳ್ಳ ಸ್ಥಳಿಯನಾಗಿರಬಹುದು ಆತ ಅಂತರ್ ರಾಜ್ಯ ಕಳ್ಳರ ಸಂಪರ್ಕದಲ್ಲಿರಬಹುದೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

ರಾತ್ರಿ ಹೊತ್ತು ವಕ್ವಾಡಿ ಮಾರ್ಗದ ರಸ್ತೆಯ ಅಕ್ಕ ಪಕ್ಕ ಮೂಡು ಗೋಪಾಡಿ, ಕುಂಭಾಸಿ, ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿರುವ ಕಾರಿನ ಬಗ್ಗೆಯೂ ಸಂಶಯವಿರುವುದರಿಂದ ಪೊಲೀಸ್ ಬಂದೋಬಸ್ತ್ ಹೆಚ್ಚಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ

Leave a Reply