ಭುಜಂಗ ಕೊರಗರಿಗೆ ಹುಟ್ಟೂರ ಸನ್ಮಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಕೊರಗ ಕಲಾ ಮೇಳದ ಕೊಳಲು ವಾದನದಲ್ಲಿನ ಪರಣತಿಗಾಗಿ ಪ್ರಸಕ್ತ ಸಾಲಿನ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದಿರುವ ಮರವಂತೆಯ ಭುಜಂಗ ಕೊರಗರಿಗೆ ಅಲ್ಲಿನ ಸೇವಾ, ಸಾಂಸ್ಕೃತಿಕ ವೇದಿಕೆ ’ಸಾಧನಾ’ ಹುಟ್ಟೂರ ಸನ್ಮಾನ ನೀಡಿ ಅಭಿನಂದಿಸಿತು.

Call us

Click Here

ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ರವಿವಾರ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸಾಧನಾ ಅಧ್ಯಕ್ಷ ಗುರುದಾಸ್ ವಿ. ಶ್ಯಾನುಭಾಗ್ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ತಾಲೂಕು ಕೊರಗ ಸಂಘಟನೆಯ ಅಧ್ಯಕ್ಷ ವಿ. ಗಣೇಶ್ ಕೊರಗರ ಬಳಿ ವಿಶಿಷ್ಟ ಸಾಂಸ್ಕೃತಿಕ ಸಂಪತ್ತು ಇದೆ. ಅವರ ಕುಲ ಕಸುಬಾದ ಬುಟ್ಟಿ ನೆಯ್ಗೆಯಲ್ಲಿ ಅವರನ್ನು ಮೀರಿಸುವವರಿಲ್ಲ. ಆದರೆ ಶೈಕ್ಷಣಿಕವಾಗಿ ಇನ್ನಷ್ಟೇ ಸಮಾನತೆ ಸಾಧಿಸಬೇಕಾಗಿದೆ ಎಂದು ಹೇಳಿ ಭುಜಂಗ ಕೊರಗರನ್ನು ಎಲ್ಲರಿಗಿಂತ ಮೊದಲು ಗೌರವಿಸಿದ ಸಾಧನಾ ಉಪಕ್ರಮವನ್ನು ಶ್ಲಾಘಿಸಿದರು. ಇನ್ನೋರ್ವ ಮುಖ್ಯ ಅತಿಥಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಶುಭ ಹಾರೈಸಿದರು. ಶೇಖರ ಮರವಂತೆ ಕೊರಗ ಕಲಾಮೇಳ ನಡೆದುಬಂದ ದಾರಿ ಮತ್ತು ಭುಜಂಗ ಕೊರಗರ ಸಾಧನೆಯ ವಿವರ ನೀಡಿದರು.

ಸಾಧನಾ ಸದಸ್ಯ ನಾರಾಯಣ ದೇವಾಡಿಗ ಪ್ರಾರ್ಥನೆ ಹಾಡಿದರು. ಎಂ. ವಿನಾಯಕ ರಾವ್ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ಅಭಿನಂದನೆಯ ನುಡಿಗಳನ್ನಾಡಿದರು. ಎಂ. ಶಂಕರ ಖಾರ್ವಿ ವಂದಿಸಿದರು. ದೇವಿದಾಸ ವಿ. ಶ್ಯಾನುಭಾಗ್ ನಿರೂಪಿಸಿದರು.\
ಕಾರ್ಯಕ್ರಮದ ಮುನ್ನ ಕೊರಗ ಕಲಾವಿದರು ತಮ್ಮ ಸಾಂಪ್ರದಾಯಿಕ ಕಲೆಯ ಪ್ರದರ್ಶನ ನೀಡಿ ರಂಜಿಸಿದರು. ವಿ. ಗಣೇಶ್ ಪ್ರದರ್ಶನದ ವಿವಿಧ ಮಜಲುಗಳ ವಿವರಣೆ ನೀಡಿದರು.

Leave a Reply