ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮಾಜ ಜೀವನದಲ್ಲಿ ಪ್ರಧಾನವಾದ ಎರಡು ಘಟಕಗಳು ಮದುವೆ ಮತ್ತು ಕುಟುಂಬ. ದುರಂತವೆಂದರೆ ಮದುವೆ ಮತ್ತು ಕುಟುಂಬ ಎಂಬ ಈ ಎರಡು ಅಪೂರ್ವ ಘಟಕಗಳ ನಡುವೆಯೇ ಹೆಣ್ಣು ಹಲವು ತೆರೆನಾದ ದೌರ್ಜನ್ಯಗಳು ಕಣ್ಣಿಗೆ ಕಾಣಿಸುವಂತಿದ್ದರೆ ಹಲವು ಅನುಭವಕ್ಕೆ ಮಾತ್ರ ಗೋಚರವಾಗುತ್ತದೆ. ಇಂತಹ ದೌರ್ಜನ್ಯ ಕಾನೂನಿನಿಂದ ನಿಯಂತ್ರಿಸಬಹುದೇ ಹೊರತು ಪೂರ್ಣಪ್ರಮಾಣದಲ್ಲಿ ತೊಡೆದು ಹಾಕಲು ಸಾಧ್ಯವಿಲ್ಲ ಎಂದು ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜ್ ಕನ್ನಡ ವಿಭಾಗ ಮುಖ್ಯಸ್ಥೆ ರೇಖಾ ಬನ್ನಾಡಿ ಹೇಳಿದರು.
ಬೆಂಗಳೂರು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಕಾಲೇಜ್ ಸಭಾಂಗಣದಲ್ಲಿ ಆಯೋಜಿಸಿದ ಮಹಿಳೆಯರ ಮೇಲಿನ ದೌರ್ಜನ್ಯಗಳು :ತಡೆಗಟ್ಟುವಿಕೆ ಮತ್ತು ಪರಿಹಾರ’ ಎಂಬ ವಿಷಯದ ಮೇಲೆ ನಡೆಸಿದ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ತವರು ಮನೆಯ ಆಸ್ತಿಯಲ್ಲಿ ಹೆಣ್ಣು ಸಮಾನ ಹಕ್ಕುದಾರಳಾದುದುರಿಂದ ವೈವಾಹಿಕ ಬದುಕು ಅಸಹನೀಯವೆನಿಸಿದಾಗ ಸಾವಿಗೆ ಶರಣಾಗದೆ ತವರು ಮೆನೆಯನ್ನು ಸೇರಿಕೊಂಡು ಬದುಕನ್ನು ಕಟ್ಟಿಸಿಕೊಳ್ಳುತ್ತಾರೆ ಎಂದರು.
ಬಿಜಾಪುರ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ, ಲೇಖಕಿಯರಾದ ಶಶಿಕಲಾ ವಸ್ತ್ರದ, ಡಾ. ಸುನಂದಮ್ಮ ಇದ್ದರು. ಮಹಿಳಾ ಅಧ್ಯಯನ ವಿಭಾಗ ಡಾ.ಭಾಗ್ಯಶ್ರೀ ನಿರ್ವಹಿಸಿದರು.