ಬಡಜನರ ಸೇವೆಗಾಗಿ ಮುಡುಪಾದ ಜೀವನ ಸಾರ್ಥಕತೆ ಕಂಡುಕೊಳ್ಳುತ್ತದೆ: ಅಪ್ಪಣ್ಣ ಹೆಗ್ಡೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ನೆಮ್ಮದಿ ಚಾರಿಟೇಬಲ್ ಟ್ರಸ್ಟ್ ಹುಟ್ಟಿ ಎರಡುವರೆ ತಿಂಗಳಿನಲ್ಲಿ ಈ ಭಾಗದಲ್ಲಿ ಒಂದು ಉತ್ತಮ ಜನಪರ ಸೇವೆಯನ್ನು ಮಾಡುವುದರ ಮೂಲಕ ಈ ಭಾಗದ ಬಡಜನರ ಅನುಕೂಲಕ್ಕಾಗಿ ಹುಟ್ಟಿಕೊಂಡ ಯುವಪಡೆಯ ಒಂದು ಶಕ್ತಿಯಾಗಿದೆ, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರ ಸಹಾಯಕ್ಕಾಗಿ ನಿಂತಿದೆ ಅಲ್ಲದೆ ರಕ್ತದಾನದಂತಹ ಉತ್ತಮ ಕೆಲಸವನ್ನು ಈ ಭಾಗದಲ್ಲಿ ಮಾಡುವೂದರ ಮೂಲಕ ಯುವಪೀಳಿಗೆಯವರಲ್ಲಿ ಜನಸೇವೆಯ ಕಿಚ್ಚನ್ನು ಮೂಡಿಸುವ ಕೆಲಸ ಮಾಡಿದೆ ಎಂದು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಕರ್ಕುಂಜೆಯಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶೀಬಿರ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Call us

Click Here

ನೆಮ್ಮದಿ ಚಾರಿಟೇಬಲ್ ಟ್ರಸ್ಟ್(ರಿ.)ಕೌಂಜೂರು ಇವರ ನೇತೃತ್ವದಲ್ಲಿ ರೆಡ್‌ಕ್ರಾಸ್ ರಕ್ತನಿಧಿ ಕುಂದಾಪುರ ಘಟಕ ಮತ್ತು ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ, ಶಿರೂರು ಮುದ್ಧುಮನೆ ಇವರ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ಕುಂಜೆ, ನೇರಳಕಟ್ಟೆ ಇಲ್ಲಿ ನಡೆಯಲಿರುವುದು.

ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ ಮಂದಾರ್ತಿ-ಶಿರೂರು ಇದರ ಛೇರ್‌ಮನ್ ಎಸ್. ಜಯರಾಮ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಭಾಗದಲ್ಲಿನ ಜನರಿಗೆ ಈ ಟ್ರಸ್ಟನ ಮೂಲಕ ಒಂದು ಉತ್ತಮ ಸಹಾಯವಾಗಿದೆ ಬಡ ಜನರ ಅನುಕೂಲಕ್ಕಾಗಿ ಇಂದು ಇಂತಹ ಕಾರ್ಯಕ್ರಮಗಳನ್ನು ಈ ಭಾಗದಲ್ಲಿ ಮಾಡಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ರೆಡ್‌ಕ್ರಾಸ್ ರಕ್ತನಿಧಿ ಘಟಕದ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ರೆಡ್‌ಕ್ರಾಸ್ ರಕ್ತನಿಧಿ ಘಟಕದ ಖಜಾಂಚಿ ಶಿವರಾಮ ಶೆಟ್ಟಿ,ರೆಡ್‌ಕ್ರಾಸ್ ರಕ್ತನಿಧಿ ಘಟಕದ ಸಂಚಾಲಕ ಮುತ್ತಯ್ಯ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ರವಿದಾಸ್, ತಾಲೂಕು ಪಂಚಾಯತ್ ಸದಸ್ಯ ಸತೀಶ ಪೂಜಾರಿ, ಬಿಜ್ರಿ ರಾಜೀವ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಲಮಣಿ, ನೆಮ್ಮದಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸುಚೇತ ಶೆಟ್ಟಿ ಉಪಸ್ಥಿತರಿದ್ಧರು ಈ ಸಂದರ್ಭ ಕಟಪಾಡಿ ರವಿ ಸ್ನೇಹಿತ ಬಳಗದ ಅಧ್ಯಕ್ಷ ಸಮಾಜ ಸೇವಕ ರವಿಶೆಟ್ಟಿ ಕಟಪಾಡಿ ಮತ್ತು ಬೇಳೂರು ಸ್ಪೂರ್ತಿದಾಮ ಇದರ ಕಾರ್ಯದರ್ಶಿ ಕೇಶವ ಕೋಟೇಶ್ವರ ಇವರುಗಳನ್ನು ಟ್ರಸ್ಟ್‌ನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

Leave a Reply