ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.27: ಇಂದು ಮುಂಜಾನೆಯ ಹೊತ್ತಿನಲ್ಲಿ ಅಪರೂಪವೆಂಬಂತೆ ತಾಲೂಕಿನಾದ್ಯಂತ ಮಂಜು ಮುಸುಕಿದ ವಾತಾವರಣ ಕಂಡುಬಂತು. ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಷ್ಟೇ ಕಾಣಸಿಗುವ ಮಂಜಿನ ಮುಂಜಾವು ಕಂಡು ಕರಾವಳಿಗರು ಉಲ್ಲಾಸಿತರಾಗಿದ್ದರು.
ಕುಂದಾಪುರ ತಾಲೂಕಿನ ಬಹುಭಾಗಗಳಲ್ಲಿ ಮಂಜಿನ ವಾತಾವರಣವಿತ್ತು. ಕೊಲ್ಲೂರು ಘಾಟಿ, ಬಾಳೆಬರೆ ಘಾಟಿಯ ತನಕ ಸಹಜವಾಗಿ ನಿತ್ಯವೂ ಮಂಜಿನ ವಾತಾವರಣವಿದ್ದರೂ ಸಮುದ್ರ ತೀರಕ್ಕೆ ಹತ್ತಿರವಿರುವ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆ. ಚಳಿಗಾಲ ಆರಂಭಗೊಳ್ಳುತ್ತಿದ್ದಂತೆ ಮುಂಜಾನೆಯಲ್ಲಿ ಕರಾವಳಿಯ ಭಾಗಗಳಲ್ಲಿ ಕಂಡುಬಂದ ಮಂಜು ಮುಸುಕಿದ ವಾತಾವರಣ ಮಲೆನಾಡು ಸೊಬಗನ್ನು ನೆನಪಿಸುವಂತಿತ್ತು.
ತಾಲೂಕಿನ ಬೈಂದೂರು, ಗಂಗೊಳ್ಳಿ, ತಲ್ಲೂರು, ಕುಂದಾಪುರ ಭಾಗಗಳಲ್ಲಿ ಕಂಡುಬಂದ ಮಂಜು ಮುಸುಕಿದ ವಾತಾವರಣದ ಚಿತ್ರಗಳು.