ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜಪ್ತಿ ಗ್ರಾಮದ ಜನತಾ ಕಾಲನಿಯ ಚಂದ್ರಾವತಿ ಶೆಟ್ಟಿಗಾರ್ತಿಯವರ ಮನೆಯಲ್ಲಿ ನೂತನ ಅರ್ಚನ ಸ್ವಸಹಾಯ ಗುಂಪಿನ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಬಿದ್ಕಲ್ ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸತೀಶ ಶೆಟ್ಟಿಗಾರ್ ಜ್ಯೋತಿ ಬೆಳಗಿಸಿ ಸಂಘವನ್ನು ಉದ್ಘಾಟಿಸಿ, ಪೂಜ್ಯ ಕಾವಂದಿರ ಶುಭಾಶಿರ್ವಾದದೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಯಮಗಳಿಗೆ ಬದ್ಧರಾಗಿ,ಅತ್ಯುತ್ತಮ ಕಾರ್ಯ ನಿರ್ವಹಣೆ ಮತ್ತು ಸ್ವಅಭಿವೃದ್ಧಿಯ ಮುಖೇನ ಈ ಗುಂಪು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣುವಂತಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಬಸ್ರೂರು ವಲಯ ಮೇಲ್ವಿಚಾರಕರಾದ ಮಂಜುನಾಥ, ಹೊಂಬಾಡಿ ಮಂಡಾಡಿ ಜಪ್ತಿ ಒಕ್ಕೂಟದ ಸೇವಾ ಪ್ರತಿನಿಧಿ ವಿಜಯಲಕ್ಷ್ಮೀ, ಅರ್ಚನ ಸ್ವಸಹಾಯ ಗುಂಪಿನ ಅಧ್ಯಕ್ಷರಾದ ಪೂರ್ಣಿಮಾ, ಕಾರ್ಯದರ್ಶಿ ಪ್ರತಿಮಾ, ಕೋಶಾಧಿಕಾರಿ ಸುಲೋಚನಾ, ಸದಸ್ಯರಾದ ಕಮಲ ಮಿಣ್ಕ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಗುಂಪಿನ ಅಧ್ಯಕ್ಷರಾದ ಪೂರ್ಣಿಮಾ ಸ್ವಾಗತಿಸಿದರೆ, ಬಸ್ರೂರು ವಲಯ ಮೇಲ್ವಿಚಾರಕರಾದ ಮಂಜುನಾಥ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊನೆಯಲ್ಲಿ ಕಾರ್ಯದರ್ಶಿ ಪ್ರತಿಮಾ ವಂದಿಸಿದರು.