ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೬೧ನೇ ಕನ್ನಡ ರಾಜೋತ್ಸವವನ್ನು ಆಚರಿಸಲಾಯಿತು. ಈ ಸಮಾರಂಭದಲ್ಲಿ ತಾಲೂಕು ಪಂಚಾಯತ್‌ಸದಸ್ಯರಾದ ಶ್ಯಾಮಲಾ ಕುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕನ್ನಡ ರಾಜೋತ್ಸವದ ಮಹತ್ವವನ್ನು ತಿಳಿಸಿದರು. ಅತಿಥಿಗಳಾಗಿ ನಾವುಂದ ಪಂಚಾಯತ್ ಸದಸ್ಯ ಗಣೇಶ್ ಪೂಜಾರಿ ಹಾಗೂ ಶಾಲೆಯ ಟ್ರಸ್ಟಿಗಳಾದ ಶ್ರೀ ತೇಜಪ್ಪ ಶೆಟ್ಟಿ, ಮಂಜು ಪೂಜಾರಿ ಮತ್ತು ಬೃಹ್ಮಶ್ರೀ ಬೈದರ್ಕಳ ಕೋಟಿ ಚೆನ್ನಯ ಗರಡಿಯ ಕಾರ್ಯದರ್ಶಿಗಳಾದ ಶೇಖರ ಪೂಜಾರಿ ಹಾಗೂ ಶಾಲೆಯ ಸಂಚಾಲಕಾರಾದ ಶಂಕರ ಪೂಜಾರಿ, ಮೇಲ್ವಿಚಾರಕರಾದ ಎ.ಬಿ. ಪೂಜಾರಿ ಭಾಗವಹಿಸಿದ್ದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಎಮ್. ಜಿ. ಬಾನಾವಳಿಕರ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕನ್ನಡ ನೆಲ. ಜಲ, ಸಂಸ್ಕೃತಿಯನ್ನು ಕೊಂಡಾಡಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ನಾಡ ಗೀತೆಯನ್ನು ಹಾಡಿ ಕನ್ನಡ ರಾಜ್ಯೋತ್ಸವ ದಿನದ ಮಹತ್ವವನ್ನು ವಿವರಿಸಿದರು. ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಗೋವಿಂದರಾಜು ಕಾರ್ಯಕ್ರಮ ನಿರೂಪಿಸಿ ಧನ್ಯವಾದಗಳನ್ನು ಅರ್ಪಿಸಿದರು.