ಕಲ್ಲಿಕೋಟೆಯಲ್ಲಿ ಶ್ರೀ ಮಂಗಲ ಸಹಸ್ರಚಂಡಿ ಮಹಾಯಾಗ: ಕೊಲ್ಲೂರಿಗೆ ವಿಶೇಷ ರಥ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೇರಳದ ಕ್ಯಾಲಿಕಟ್‌ನ ಪಂತೀರನ್‌ಕಾವು ಗಣೇಶ ಸಾಧನ ಕೇಂದ್ರದ ಗುರುಗಳಾದ ಶ್ರೀ ಶ್ರೀ ಯಜ್ಞಾಚಾರ್ಯ ಇವರ ಮಾರ್ಗದರ್ಶನದಲ್ಲಿ ಲೋಕಕಲ್ಯಾರ್ಥವಾಗಿ ನ.೩೦ರಿಂದ ಪ್ರಾರಂಭವಾಗುವ ಶ್ರೀ ಮಂಗಲ ಸಹಸ್ರಚಂಡಿ ಮಹಾಯಾಗದಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ಸನ್ನಿಧಾನದಿಂದ ವಿಶೇಷ ರಥದಲ್ಲಿ ದೀಪಾಗ್ನಿ ಕೊಂಡೊಯ್ಯಲಾಯಿತು.

Call us

Click Here

ಗುರುವಾರ ಬೆಳಿಗ್ಗೆ ಗೋಕರ್ಣ ಕ್ಷೇತ್ರದಿಂದ ತಿಡಂಬೊ (ಪೂಜೆಗೆ ಇಡುವ ಮೂರ್ತಿ) ದೇವರನ್ನು ಹೊತ್ತು ಕೊಲ್ಲೂರಿಗೆ ಸಾಗಿಬಂದ ವಿಶೇಷ ರಥವು ಯಾಗದ ಆರಂಭಕ್ಕೆ ಬೇಕಾದ ದೀಪಾಗ್ನಿಯನ್ನು ದೇವಿಯ ಸನ್ನಿಧಾನದಿಂದ ಪಡೆದು ನಂತರ ಶ್ರೀಕ್ಷೇತ್ರ ಕಟೀಲಿಗೆ ತೆರಳಿತು. ಅಲ್ಲಿಂದ ದೇವಿಯ ಪವಿತ್ರ ಗ್ರಂಥವನ್ನು ಪಡೆದು ನ.೦೬ಕ್ಕೆ ಕಲ್ಲಿಕೋಟೆ ತಲುಪಲಿದೆ. ನ.೧೮ರಿಂದ ಹೊರಡಲಿರುವ ಇನ್ನೊಂದು ಯಾತ್ರೆಯಲ್ಲಿ ಕನ್ಯಾಕುಮಾರಿಯಿಂದ ಶ್ರೀಚಂಡಿಕಾ ಮೂರ್ತಿಯನ್ನು ವಿಶೇಷ ರಥದಲ್ಲಿ ಕೇರಳದ ಎಲ್ಲಾ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ನ.೨೬ರಂದು ಯಾಗಸ್ಥಳಕ್ಕೆ ತರಲಾಗುವುದು. ಅಂದಿನಿಂದ (ನ.೨೬) ಸತತ ೧೨ ದಿನಗಳ ಪರ್ಯಂತ ಯಾಗದ ಸಂಪೂರ್ಣ ವಿಧಿ-ವಿಧಾನಗಳ ಮೂಲಕ ಡಿ.೧೦ರಂದು ಮಹಾಪೂರ್ಣಾಹುತಿ ನೀಡಲಾಗುವುದು. ಹಿಂದೆ ೨೦೦೪ರಲ್ಲಿ ಈ ಯಾಗ ನಡೆದಂತೆ ಈ ಬಾರಿಯೂ ಕೂಡಾ ಸಿದ್ದತೆಯಗುತ್ತಿದೆ ಎಂದು ರಥಯಾತ್ರೆಯ ಉಸ್ತುವಾರಿ ಸುರ್ಜಿತ್ ವಿಜಯವಾಣಿಗೆ ತಿಳಿಸಿದರು.

ನ.೩೦ರಂದು ಪ್ರಾರಂಭವಾಗಲಿರುವ ಯಾಗಕ್ಕೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಚಾಲನೆ ನೀಡಲಿದ್ದು, ವಿಎಚ್‌ಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು, ದೇಶದಾದ್ಯಂತದ ಸಂತರು, ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು, ಜನಪ್ರತಿನಿಧಿಗಳು, ಹಿಂದು ಸಂಘಟನೆಗಳ ಮುಖ್ಯಸ್ಥರು, ದೇಶ-ವಿದೇಶದ ಭಕ್ತರು ಈ ಯಾಗದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ನ.೦೬ರಂದು ಕರ್ನಾಟಕ್ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಭಾಗದ ರಥಯಾತ್ರೆಯ ಸಮಾರೋಪಕ್ಕೆ ಕಲ್ಲಿಕೋಟೆಗೆ ಭೇಟಿನೀಡಲಿದ್ದಾರೆ ಎಂದೂ ಅವರು ತಿಳಿಸಿದರು.

Leave a Reply