ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ವಿಶ್ವಕೋಶ ಎಂದೇ ಖ್ಯಾತರಾದ ನಿವೃತ್ತ ಪೋಸ್ಟ್ ಮಾಸ್ಟರ್ ಕೆ. ರಾಮಚಂದ್ರ ಕೊತ್ವಾಲ್ ದಂಪತಿಗಳನ್ನು ಅವರ ಸ್ವಗೃಹದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಮತ್ತು ರೋಟರಿ ಸದಸ್ಯರು ಶಾಲು ಹೊದಿಸಿ, ಸನ್ಮಾನ ಪತ್ರ ನೀಡಿ ಗೌರವಿಸಿದರು.
ಕುಂದಾಪುರದ ಧಾರ್ಮಿಕ, ಸಾಹಿತ್ಯಿಕ, ಐತಿಹಾಸಿಕ, ವ್ಯವಹಾರಿಕ ಇತರ ಎಲ್ಲಾ ಚಟುವಟಿಕೆಗಳನ್ನು ಹತ್ತಿರದಿಂದ ಅಧ್ಯಯನ ಮಾಡಿ ತಮ್ಮ ಅನುಭವಗಳನ್ನು ಲೇಖನಗಳ ಮೂಲಕ ಸಮಾಜಕ್ಕೆ ಧಾರೆ ಎರೆದ ಕೆ. ಆರ್. ಕೊತ್ವಾಲ್‌ರು ಇಂದಿನ ರಾಜ್ಯೋತ್ಸವ ಗೌರವಕ್ಕೆ ಅರ್ಹರು ಎಂದು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅದ್ಯಕ್ಷರಾದ ಕೆ. ನರಸಿಂಹ ಹೊಳ್ಳ ಅವರು ಹೇಳಿದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಪೂರ್ವಾಧ್ಯಕ್ಷರಾದ ಕೆ. ದಿನಕರ ಪಟೇಲ್, ಸದಸ್ಯರಾದ ಉಲ್ಲಾಸ್ ಕ್ರಾಸ್ತಾ, ಸೀತಾರಾಮ, ಸದಾನಂದ ಉಡುಪ, ಭಾಸ್ಕರ ಬಾಣ, ಸಿ.ಹೆಚ್. ಗಣೇಶ, ಮಂಜುನಾಥ ಕೆ.ಎಸ್., ಅರುಣಚಂದ್ರ ಕೊತ್ವಾಲ್, ಅರವಿಂದ ಕೊತ್ವಾಲ್ ಇನ್ನಿತರರು ಉಪಸ್ಥಿತರಿದ್ದರು.