ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಎಲ್ಲಾ ಪ್ರದೇಶಗಳು ಅಭಿವೃದ್ಧಿ ಹೊಂದುತ್ತಿದ್ದರೂ ಗಂಗೊಳ್ಳಿ ಮಾತ್ರ ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣುತ್ತಿದೆ. ಗಂಗೊಳ್ಳಿ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರಲ್ಲೂ ಒಗ್ಗಟ್ಟು ಮುಖ್ಯವಾಗಿದೆ. ಗಂಗೊಳ್ಳಿಯಲ್ಲಿ ಕಳೆದ ಎರಡು ವರ್ಷಗಳಿಂದ ಬಡರೋಗಿಗಳಿಗೆ ಸೇವೆ ನೀಡುತ್ತಿರುವ ಸೋಷಿಯಲ್ ಸ್ಟೋರ್ಟ್ಸ್ ಚಾರಿಟೇಬಲ್ ಸಂಸ್ಥೆಯ ಅಂಬುಲೆನ್ಸ್ ಸೇವೆಯು ಗ್ರಾಮದ ಜನರಿಗೆ ಇನ್ನಷ್ಟು ವ್ಯವಸ್ಥಿತವಾಗಿ ಕ್ಲಪ್ತ ಸಮಯಕ್ಕೆ ದೊರೆಯುವಂತಾಗಬೇಕು ಎಂದು ಗೋವಾದ ಉದ್ಯಮಿ ಮೌಲಾನಾ ಇಬ್ರಾಹಿಂ ಗಂಗೊಳ್ಳಿ ಹೇಳಿದರು.
ಅವರು ಗಂಗೊಳ್ಳಿಯ ಶ್ರೀ ರಾಮ ಮಂದಿರದ ಬಳಿ ಗಂಗೊಳ್ಳಿಯ ಸೋಷಿಯಲ್ ಸ್ಟೋರ್ಟ್ಸ್ ಚಾರಿಟೇಬಲ್ ಸಂಸ್ಥೆಯ ಪ್ರಾಯೋಜಿತ ಸೂಪರ್ ಸ್ಟಾರ್ ಕ್ರಿಕೆಟರ‍್ಸ್ ಇವರ ೨೪x೭ ಅಂಬುಲೆನ್ಸ್‌ನ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಮೌಲಾನಾ ವಹಾಬ್ ಸಾಹೇಬ್ ಆಶೀರ್ವನ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಶಬ್ಬೀರ್ ಸಾಹೇಬ್, ಮೌಲಾನಾ ಅಬ್ಬು ಸಾಹೇಬ್, ಮೌಲಾನಾ ಮಹಮ್ಮದ್ ಗೌಸ್ ಹಾಗೂ ಸೂಪರ್ ಸ್ಟಾರ್ ಕ್ರಿಕೆಟರ‍್ಸ್ ಸಂಸ್ಥೆಯ ಸದಸ್ಯರು ಸೂಪರ್ ಸ್ಟಾರ್ ಕ್ರಿಕೆಟರ‍್ಸ್ ಉಪಸ್ಥಿತರಿದ್ದರು.