ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಮಾಜಿಕ ಜಾಲತಾಣ ಫೇಸ್ಬುಕ್‌ನಲ್ಲಿ ಭಾರತದ ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಕುರಿತಾಗಿ ಅವಹೇಳಕಾರಿಯಾಗಿ ಸ್ಟೇಟಸ್ ಬರೆದುಕೊಂಡಿದ್ದ ಈರ್ವರು ಯುವಕರ ವಿರುದ್ದ ಕುಂದಾಪುರ, ಗಂಗೊಳ್ಳಿ, ಶಂಕರನಾರಾಯಣ ಸೇರಿದಂತೆ ಇತರೆ ಠಾಣೆಗಳಲ್ಲಿ ದೂರು ನೀಡಿದ್ದಾರೆ.
ರಂಜಿತ್ ರಂಜು ಶೆಟ್ಟಿ ಹಾಗೂ ವಿಕ್ರಮ್ ಎಂ. ಕುಂದಾಪುರ ಎಂಬ ಯುವಕರು ಫೇಸ್ಬುಕ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘಟನೆಯ ಪ್ರಮುಖರು ಠಾಣೆಯಲ್ಲಿ ದೂರು ನೀಡಿದ್ದು ಆಪಾದಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.