ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಇಂದು ಸುಮಾರು ನಾಲ್ಕು ಮಿಲಿಯನ್ ಬಡ ಮಕ್ಕಳಿಗೆ ಆಹಾರ ಸಿಗುತ್ತಿಲ್ಲ. ಅವರಲ್ಲಿ ಸಾವಿರಾರು ಮಂದಿ ‘ನೈಡ್ಸ್’ ಎಂಬ ಖಾಯಿಲೆಯಿಂದ ಬಳಲುತಿದ್ದಾರೆ. ಪೌಷ್ಟಿಕ ಆಹಾರದ ಕೊರತೆಯಿಂದಾಗಿ ಗರ್ಭಿಣಿಯರಿಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಶಾಲಾ ಮಕ್ಕಳಿಗೆ ಬಿಸಿ ಊಟ ಕೊಡುವುದಕ್ಕಿಂತ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡುವುದು ಸೂಕ್ತ ಎಂದು . ಎಂದು ಡಾ. ಬಿ.ಎಂ. ಹೆಗ್ಡೆ ಹೇಳಿದರು.
ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆ, ಪುಂಡಲೀಕ ಹಾಲಂಬಿ ಸಭಾಂಗಣದಲ್ಲಿ ‘ಆರೋಗ್ಯ ಮತ್ತು ಆಹಾರ’ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸದಲ್ಲಿ ಅವರು ಮಾತನಾಡಿದರು.
ಪ್ರತಿದಿನವೂ ಎಲ್ಲರಿಗೂ ಆಹಾರವು ದಕ್ಕುವಂತೆ ಮಾಡಿ, ನಾನು ಬದುಕಿ ಇತರರನ್ನೂ ಬದುಕಲು ಬಿಡುವಂತಹ ದೃಡಸಂಕಲ್ಪ ಮಾಡಬೇಕು. ಮನಸ್ಸು ಸಂತಸದಿಂದ ಇದ್ದರೆ ಆರೋಗ್ಯ ಚನ್ನಾಗಿರುತ್ತದೆ. ಸಂತಸ ಎನ್ನುವುದು ಕನ್ನಡಿ ಇದ್ದ ಹಾಗೆ. ಬೇರೆಯವರಿಗೆ ಖುಷಿ ಕೊಟ್ಟರೆ ಸಂತೋಷ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ನುಡಿಸಿರಿಯಲ್ಲಿ ಇಂತಹ ಜನರನ್ನು ಉತ್ತೇಜನಗೊಳಿಸುವ ಕಾರ್ಯಕ್ರಮಗಳು ಇನ್ನಷ್ಟು ಆಗಲಿ ಎಂದರು.