ಫೀಳಿಡುವ ಆನೆ, ಘರ್ಜಿಸುವ ಸಿಂಹ ನೋಡಲು ಮುಗಿಬಿದ್ದ ಜನ!

Call us

Call us

Call us

ಶಾಂಭವಿ ಎಂ. ಜೆ | ಕುಂದಾಪ್ರ ಡಾಟ್ ಕಾಂ ವರದಿ
ಮೂಡುಬಿದಿರೆ: ಸೊಂಡಿಲೆತ್ತಿ ಘೀಳಿಡುವ ಆನೆಗಳು, ಗರ್ಜಿಸಿ ಬೆದರಿಸುವ ಹುಲಿ ಸಿಂಹ, ಡಿಜೆ ಧ್ವನಿಗೆ ತಕ್ಕಂತೆ ತಲೆಯಾಡಿಸುವ ಚಿಂಪಾಂಜಿ. ದೂರದಿಂದ ನೋಡುವವರಿಗೆ ಎಲ್ಲವೂ ಜೀವಂತ ಪ್ರಾಣಿಗಳೇ. ಸಮೀಪಕ್ಕೆ ತೆರಳಿದರಷ್ಟೇ ತಿಳಿಯುವುದು ಅವು ಸುಂದರ ಮಾನವ ನಿರ್ಮಿತ ಕಲಾಕೃತಿಗಳು.

Call us

Click Here

ಆಳ್ವಾಸ್ ನುಡಿಸಿರಿಯಲ್ಲಿ ರತ್ನಾಕರವರ್ಣಿ ವೇದಿಕೆಯ ಮುಂಭಾಗದಲ್ಲಿದಲ್ಲಿ ನಿಲ್ಲಿಸಲಾಗಿದ್ದ ಈ ಆಕ್ಷನ್ ಕಲಾಕೃತಿಗಳು ಪ್ರೇಕ್ಷಕರ ಆಕರ್ಷಣೆಯ ಕೇಂದ್ರಬಿಂದು. ಕೇರಳದ ಜೇಡಿಗೋಬೆ ಕಲಾವಿದರಿಂದ ಮೂಡಿಬಂದ ಪ್ರಾಣಿಗಳ ಕಲಾಕೃತಿಗಳು ಹದಿನಾರು ಮಂದಿಯ ತಂಡದೊಂದಿಗೆ ಮೂರು ದಿನಗಳ ಕಾಲ ಪ್ರದರ್ಶನಕ್ಕಾಗಿ ವಿದ್ಯಾಗಿರಿ ಮೈದಾನದಲ್ಲಿ ನೆಲೆಕಂಡಿವೆ.

ಕಲಾಕೃತಿಗಳನ್ನು ಮೆಟಲ್, ಕಬ್ಬಿಣ, ಪೈಬರ್ ಹಾಗೂ ಕಪ್ಪು ಬಟ್ಟೆಗಳನ್ನು ಬಳಸಿ ರಚಿಸಲಾಗಿದ್ದು ವಿದ್ಯುತ್ ಸಹಾಯದಿಂದ ಪ್ರಾಣಿಗಳು ಕಿವಿ, ಕತ್ತು, ಸೊಂಡಿಲುಗಳನ್ನು ಅಲ್ಲಾಡಿಸುತ್ತವೆ. ಕೆಳಭಾಗದಲ್ಲಿ ಗಾಲಿಗಳನ್ನು ಅಳವಡಿಸಿರುವುದರಿಂದ ಒಂದೆಡೆಯಿಂದ ಮತ್ತೊಂಡೆಗೆ ಸುಲಭವಾಗಿ ಸಾಗಿಸುತ್ತೇವೆ ಎನ್ನುತ್ತಾರೆ ಕೇರಳದ ಆದರ್ಶ್.

ಆನೆ ಹುಲಿ ಸಿಂಹವನ್ನು ಕಾಡು, ಮೃಗಾಲದಲ್ಲಿ ನೋಡುತ್ತೇವೆ ಆದರೆ ಇಷ್ಟೊಂದು ಬೃಹದಾಕಾರದ ಪ್ರಾಣಿಗಳ ಪ್ರತಿರೂಪವನ್ನು ಹತ್ತಿರದಿಂದ ಕಂಡು ಖುಷಿಯಾಗುತ್ತಿದೆ ಎನ್ನುತ್ತಾರೆ ಮೂರನೇ ತರಗತಿಯ ವಿದ್ಯಾರ್ಥಿ ಮುನುಜಾ ನೇಹಿಗಾ.

ಕೇರಳ ಭಾಗದಲ್ಲಿ ಇದು ಸಾಮಾನ್ಯವಾಗಿದ್ದು ನುಡಿಸಿರಿಗೆ ಇದರ ಆಗಮನ ಮೊದಲ ಬಾರಿಗೆ ಆಗಮಿಸಿದೆ. ಒಂದೆಡೆ ಮಕ್ಕಳು ವಿದ್ಯಾರ್ಥಿಗಳು, ಹಿರಿಯರು ತಂಡ ತಂಡವಾಗಿ ನಿಂತು ಛಾಯಾಚಿತ್ರ ತೆಗೆಸಿಕೊಳುತ್ತಿದ್ದರೇ, ಮತ್ತೊಂದೆಡೆ ಕಲಾಕೃತಿಯನ್ನು ರಚಿಸಿದ್ದು ಹೇಗೆ ಎಂಬ ಚರ್ಚೆ. ಮಕ್ಕಳಿಗಂತೂ ಬಳಿ ನಿಂತುಕೊಳ್ಳುವುದು ಸಂಭ್ರಮ. ಒಟ್ಟಿನಲ್ಲಿ ಕಲಾವಿದರ ಕೈಚಳದಲ್ಲಿ ಮೂಡಿಬಂದ ಈ ಪ್ರಾಣಿಗಳು ನೋಡುಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವುದಲ್ಲದೇ, ನಿಜವಾದ ಪ್ರಾಣಿಗಳನ್ನು ಕಂಡ ಅನುಭವ ಮಡಿಕೊಟ್ಟಿದೆ.

Click here

Click here

Click here

Click Here

Call us

Call us

ಶಾಂಭವಿ ಆಳ್ವಾಸ್ ಕಾಲೇಜು ಎಂಸಿಜೆ ಅಂತಿಮ ವರ್ಷದ ವಿದ್ಯಾರ್ಥಿನಿ.

_mg_2365 _mg_2376

Leave a Reply