ಶಾಂಭವಿ ಎಂ. ಜೆ. | ಕುಂದಾಪ್ರ ಡಾಟ್ ಕಾಂ ವರದಿ.
ಅತ್ತಿಂದಿತ್ತ ಓಡಾಡುತ್ತಿರುವ ನಾಯಿಗಳನ್ನು ನೋಡಿದರೆ ಎತ್ತಿ ಮುದ್ದಾಡಬೇಕು ಎನ್ನುವ ಆಸೆ. ಆದರೆ ಅದರ ದಷ್ಟಪುಷ್ಟ ದೇಹವನ್ನು ಕಂಡರೆ ಭಯ. ಅದೆನೇ ಆದರೂ ನಾವು ವಾಕ್‌ತ್ರೋ ಮಾಡಲು ರೆಡಿ ಎಂದು ಗಾಂಭೀರ್ಯದಿಂದ ನಿಂತಿದ್ದ ಶ್ವಾನಗಳನ್ನು ಕಂಡು ಮೂಕ ವಿಸ್ಮಿತರಾಗಿದ್ದ
ಪ್ರೇಕ್ಷಕರು.
ಆಳ್ವಾಸ್ ನುಡಿಸಿರಿಯಲ್ಲಿ ನಡೆದ ಶ್ವಾನಸಿರಿಯಲ್ಲಿ ವಿವಿಧ ಊರಿನಿಂದ ಬಂದಿದ್ದ ವಿವಿಧ ಬೀಗಲ್, ಡ್ಯಾಷ್ ಆಂಡ್ ಡಾಗ್, ಕ್ರೌನ್, ರ್‍ಯಾಟ್ ವಿಲ್ಲರ್, ರ್‍ಯಾಪ್, ಅಸ್ಕಿ ಹೀಗೆ ೧೪ ತಳಿಯ ನಾಯಿಗಳನ್ನು ಸ್ವರ್ಧೆಯಲ್ಲಿದ್ದವು.
ಚಿಕ್ಕ ಮುಖದ ಷೂಜ್ಹೊ ನೆರೆದಿದ್ದ ಪ್ರೇಕ್ಷಕರಿಗೆ ಆಕರ್ಷಿತ್ತದೇ, ಕರೆದವರ ಬಳಿ ನಿಧಾನಕ್ಕೆ ಹೆಜ್ಜೆ ಹಾಕುತ್ತಿತ್ತು. ಜರ್ಮನ್ ಶಫರ್ಡ್ ತನ್ನ ರೇಷ್ಮೆಯಂತಹ ಕೂದಲಿನಿಂದ ಗಮನ ಸೆಳೆದರೇ, ಕ್ರೌನ್ ತಳಿಯ ಶ್ವಾನವು ತನ್ನ ತೆಳ್ಳಗಿನ ಮೈಕಟ್ಟು, ಚೂಪಾದ ಬಾಲದಿಂದ ತನ್ನ ಮೈ ಬಳಕಿಸುತ್ತಿತ್ತು. ಚಾಣಕ್ಷತನದಿಂದ ಬೇಟೆಯಾಡುವ ಶ್ವಾನ ಎಂದು ಹೆಸರು ಪಡೆದಿರುವ ಉತ್ತರ ಕರ್ನಾಟಕದ ತಳಿ ತನ್ನ ಚಲ್ಲಾಟದಿಂದ ನೆರೆದಿದ್ದವರಿಗೆ ಮನೊರಂಜನೆ ನೀಡುತ್ತಿತ್ತು.
ಹತ್ತಾರು ತಳಿಯ ನಾಯಿಗಳನ್ನು ಒಂದೆಡೆ ನೋಡುವುದು ಅಪರೂಪ. ಈ ರೀತಿಯ ಪ್ರದರ್ಶನದಿಂದ ಜನರಿಗೆ ಶ್ವಾನಗಳ ಪರಿಚಯದೊಂದಿಗೆ ನಾವೂ ಮನೆಯಲ್ಲಿಯೂ ಯಾವುದಾದರೂ ಶ್ವಾನವನ್ನು ಸಾಕಬೇಕು ಎಂಬ ಆಸೆ ಹುಟ್ಟುವಂತೆ ಮಾಡುತ್ತದೆ ಎಂದು ಆಳ್ವಾಸ್ ಎಂಹೆಚ್‌ಆರ್‌ಡಿ ವಿಭಾಗದ ವಿದ್ಯಾರ್ಥಿ ಕಿರಣ್ ಹೇಳುತ್ತಾರೆ.
Al