ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ೨೦೧೬-೧೭ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ೧೪ರ ವಯೋಮಾನದ ಬಾಲಕಿಯರ ಎತ್ತರ ಜಿಗಿತ/ಹರ್ಡಲ್ಸ್ ೨೦೦ಮೀ ಓಟದ ಸ್ಪರ್ಧೆಗಳಲ್ಲಿ ಅಕ್ಷತಾ ಉತ್ತಮ ಸಾಧನೆಗೈದು ಬಾಗಲಕೋಟೆ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾಳೆ. ಕರಾಟೆ ಸ್ಪರ್ಧೆಯ ೨೯ ರಿಂದ ೩೫ ಕೆ.ಜಿ ವಿಭಾಗದಲ್ಲಿ ಸುಬ್ರಹ್ಮಣ್ಯ ಚಿನ್ನದ ಪದಕ ಪಡೆದು ಉಡುಪಿ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ ಆಗಿರುತ್ತಾನೆ. ಈ ಇಬ್ಬರು ಕ್ರೀಡಾಪಟುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಸತ್ಯನಾರಾಯಣ ಜಿ ಹಾಗೂ ಮಂಜುನಾಥ ಶೆಟ್ಟಿ ತರಬೇತಿ ನೀಡಿರುತ್ತಾರೆ.
ಕ್ರೀಡಾಕೂಟದಲ್ಲಿ ಉಪ್ಪುಂದ ಜ್ಯೂನಿಯರ್ ಕಾಲೇಜು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
