ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಹಕಾರಿ ಸಂಘಗಳ ಏಳಿಗೆಯಲ್ಲಿ ಗ್ರಾಮೀಣ ಭಾಗದ ಜನರು, ಕೃಷಿಕರು ಹಾಗೂ ಉದ್ದಿಮೆದಾರರ ಪಾಲು ದೊಡ್ಡದಿದ್ದು ಸಂಘದೊಂದಿಗಿನ ನಿರಂತರ ವ್ಯವಹಾರದಿಂದ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತಿದೆ ಎಂದು ಶ್ರೀ ರಾಮ ಸೌಹಾರ್ದ ಕ್ರೇಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಅವರು ಶ್ರೀ ರಾಮ ಸೌಹಾರ್ದ ಕ್ರೇಡಿಟ್ ಕೋ-ಆಪರೇಟಿವ್ ನಾಗೂರು ಶಾಖೆಗೆ ಒಂದು ವರ್ಷ ಪೂರ್ಣಗೊಂಡ ಪ್ರಯುಕ್ತ ಆಯೋಜಿಸಲಾಗಿದ್ದ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಹಕರಿಗೆ ಸಕಾಲದ ಸ್ಪಂದನೆ, ಠೇವಣಿಗಳಿಗೆ ಉತ್ತಮ ಬಡ್ಡಿದರ ಹಾಗೂ ಸಕಾಲದಲ್ಲಿ ಆರ್ಥಿಕ ಅಗತ್ಯತೆಯನ್ನು ಪೂರೈಸುತ್ತಿರುವ ಸಂಘಕ್ಕೆ ಪ್ರತಿಯಾಗಿ ದೊರೆಯುತ್ತಿರುವ ಗ್ರಾಹಕರ ನೆರವು ಸಂಘದ ಯಶಸ್ಸಿಗೆ ಕಾರಣವಾಗಿದ್ದು ಪ್ರತಿಯೋರ್ವರಿಗೂ ಧನ್ಯವಾದ ಸಮರ್ಪಿಸುವುದಾಗಿ ಅವರು ಹೇಳಿದರು.
ಶ್ರೀ ರಾಮ ಸೌಹಾರ್ದ ಕ್ರೇಡಿಟ್ ಕೋ-ಆಪರೇಟಿವ್ ಉಪಾಧ್ಯಕ್ಷ ವಿನಾಯಕ ರಾವ್, ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಪಿ. ಯಡ್ತರೆ, ಬೈಂದೂರು ವಲಯ ನವೋದಯ ಸಂಘದ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ, ಶಾಖಾ ವ್ಯವಸ್ಥಾಪಕ ರಾಜೇಂದ್ರ ದೇವಾಡಿಗ ಉಪಸ್ಥಿತರಿದ್ದರು. ತಾಪಂ ಸದಸ್ಯ ವಿಜಯಕುಮಾರ್ ಶೆಟ್ಟಿ, ಗ್ರಾಪಂ ಸದಸ್ಯ ಈಶ್ವರ ದೇವಾಡಿಗ, ಮದನ್‌ಕುಮಾರ್, ಚಂದ್ರಶೀಲ ಶೆಟ್ಟಿ, ಆನಂದ ಶೆಟ್ಟಿ, ಶಂಕರ ಶೆಟ್ಟಿ ಮೊದಲಾದವರು ಸಂಘದ ಕಾರ್ಯವೈಖರಿಯನ್ನು ಅಭಿನಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.