ಕುಂದಾಪುರಕ್ಕೆ ಬಂದ ಮೂರು ಕೊಂಬು, ಕಣ್ಣಿನ ಬಸವ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪಂಡರಾಪುರ ದಿಂದ ಹೊರಟ ದೇವ ಸ್ವರೂಪಿ ಎಂದೇ ಗುರುತಿಸಿಕೊಂಡ ಮೂರುಕಣ್ಣಿನ ಬಸವ ಹೆಸರು ಸೋಮನಾಥ. ೧೨ನೇ ಜೋತಿರ‍್ಲಿಂಗ ದರ್ಶನ ನಿಮಿತ್ತ ಪಂಡರಾಪುರದಿಂದ ಹೊರಟ ಬಸವ ನಾನಾಕಡೆ ಸಂಚರಿಸಿ, ಕುಂದಾಪುರಕ್ಕೆ ಆಗಮಿಸಿದೆ.

ಮಿನಿ ಟೆಂಪೂದಲ್ಲಿ ಆಗಮಿಸಿದ ಬಸವನಿಗೆ ಗಗ್ಗರಗಳ ಶೃಂಗಾರವಿದ್ದು, ವಾಹನ ಹಿಂಮುಖವಾಗಿ ನಿಂತಿದ್ದಾನೆ. ನಡು ನೆತ್ತಿಮೇಲೆ ನೇರಕ್ಕೆ ಸಾಗಿದ ಒಂದು ಕೊಂಬಿದ್ದು, ಮತ್ತೆರಡು ಕೊಂಬುಗಳು ಮಾಮೂಲು ಎತ್ತಗಳಿಗೆ ಬರುವಹಾಗೆ ಇದೆ. ಎರಡು ಕಣ್ಣು ಮುಖದ ಇಕ್ಕೆಡೆಗಳಲ್ಲಿದ್ದರೆ, ಮೂರನೇ ಕಣ್ಣು ನೇರಕ್ಕೆ ಸಾಗಿದ ಕೊಂಬಿನ ಬದಿಯಲ್ಲಿದೆ.

ಹದಿನಾಲ್ಕು ವರ್ಷದ ಪ್ರಾಯದ ಬಸವ ಸೌಮ್ಯ ಸ್ವರೂಪಿಯಾಗಿದ್ದು, ವಾಹನ ಸಂಚಾರದ ಸಮಯ ಅಲ್ಲಾಡದೇ ನಿಲ್ಲುತ್ತಾನೆ. ವೀಕ್ಷಕರು ಬಂದರೆ ತನ್ನ ಪಾಡಿಗೆ ತಾನಿದ್ದರೆ, ಭಕ್ತರು ಇದು ಈಶ್ವರನ ಅಪರವಾತರವಾಗಿದ್ದು, ನಂದಿ ಈಶ್ವರನ ಮೂರನೇ ಕಣ್ಣು ಹೊತ್ತು ಭೂಮಿಗೆ ಬಂದಿದ್ದಾನೆ ಎನ್ನುವ ಭಯ, ಭಕ್ತಿಯಿಂದ ನಮಿಸಿ, ಆಶೀರ್ವಾದ ಪಡೆಯುತ್ತಿದ್ದಾರೆ.

Leave a Reply