ಸುವರ್ಣ ಸಂಭ್ರಮದಲ್ಲಿ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಫ್ರೌಢಶಾಲೆ

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಯಾವುದೇ ಊರಿನ ಶ್ರೀಮಂತಿಕೆ ತೆರೆದುಕೊಳ್ಳುವುದು ಅಲ್ಲಿ ಇರುವ ವಿದ್ಯಾ ಸಂಸ್ಥೆಗಳ ವೈಭವದಲ್ಲಿ. ವಿದ್ಯೆ ನೀಡುವ ಶಾಲೆಗಳು ಊರಿನ ಅತ್ಯಮೂಲ್ಯ ಆಸ್ತಿ. ಊರಿನ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮಾಜದ ಬೆಳವಣಿಗೆಯ ಹಿಂದೆ ಶಾಲೆಗಳು ವಹಿಸುವ ಪಾತ್ರ ಅನನ್ಯವಾದದ್ದು. ಅಂತಹ ಶಾಲೆಗಳನ್ನು ಉಳಿಸಿ ಬೆಳೆಸಿ ಅಭಿವೃದ್ಧಿಗೊಳಿಸಿ ಭವಿತವ್ಯವನ್ನು ಮತ್ತಷ್ಟು ಸುಂದರವಾಗಿಸುವ ಹೊಣೆಗಾರಿಕೆ ಎಲ್ಲರದ್ದೂ ಆಗಿದೆ

Call us

Click Here

ಕಳೆದ ಐವತ್ತು ವರುಷಗಳಿಂದ ಊರ ಪರವೂರ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಾ ಸಾರ್ಥಕ ಐವತ್ತು ವರುಷಗಳನ್ನು ಪೂರೈಸಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಫ್ರೌಢಶಾಲೆ ಇದೀಗ ತನ್ನ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ

1966ರಲ್ಲಿ ಪೂಜ್ಯ ಫಾದರ್ ಮೈಕಲ್ ನೊರೊನ್ನಾ ಅವರು ಗಂಗೊಳ್ಳಿಯ ಕಡಲ ತಡಿಯಲ್ಲಿ ಹೆಣ್ಮಕ್ಕಳಿಗಾಗಿಯೇ ವಿಶೇಷವಾದ ಫ್ರೌಢಶಾಲೆಯನ್ನು ತೆರೆಯುವ ಕನಸು ಹೊತ್ತು ಗಂಗೊಳ್ಳಿಯ ಮಾತಾ ಕೊಸೆಸಾಂವ್ ಅಮ್ಮನವರ ಇಗರ್ಜಿಯ ಸನಿಹದಲ್ಲಿ ಶಾಲೆಯೊಂದನ್ನು ಸಣ್ಣ ಕೊಠಡಿಯೊಂದರಲ್ಲಿ ಆರಂಭಿಸಿದರು.ಕಡಲ ತಾರೆ ಎನ್ನುವ ಅನ್ವರ್ಥ ನಾಮದೊಂದಿಗೆ ಆ ಶಾಲೆಗೆ ಸ್ಟೆಲ್ಲಾ ಮಾರಿಸ್ ಎಂದು ಕರೆದರು.ಅವತ್ತಿಗೆ ಅದರ ಮೊದಲ ಬ್ಯಾಚ್ ನಲ್ಲಿ ಇದ್ದ ವಿದ್ಯಾರ್ಥಿಗಳ ಸಂಖ್ಯೆ ೨೧.ಎಮ್ ಈಡಲ್ ಬರ್ಗ ಅದರ ಪ್ರಥಮ ಮುಖ್ಯೋಫಧ್ಯಾಯಿನಿಯಾಗಿ ನೇಮಕಗೊಂಡಿದ್ದರುಕೆಲ ವರುಷಗಳ ಬಳಿಕ ಅದರ ಉಸ್ತುವಾರಿಯನ್ನು ಅಪೋಸ್ತೋಲಿಕ್ ಕಾನ್ವೆಂಟ್ ಶಿಕ್ಷಣ ಸಂಸ್ಥೆಗೆ ವಹಿಸಲಾಯಿತು. ಇಂದಿಗೂ ಆ ಸಂಸ್ಥೆ ಅತ್ಯಂತ ಸಮರ್ಪಕವಾಗಿ ಈ ಫ್ರೌಢಶಾಲೆಯನ್ನು ನಿರ್ವಹಿಸಿಕೊಂಡು ಬರುತ್ತಿರುವುದು ಅಭಿನಂದನೀಯ ಸಂಗತಿ.

ಹಾಗೆ ಆರಂಭಗೊಂಡ ಸಂಸ್ಥೆ ಕಾಲಕ್ರಮೇಣ ಬೆಳೆಯುತ್ತಾ ಹೋಯಿತು. ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿ ಗಂಗೊಳ್ಳಿ ಹಾಗು ಸುತ್ತ ಮುತ್ತಲ ಊರುಗಳ ಜನತೆಯ ಅಚ್ಚುಮೆಚ್ಚಿನ ಶಾಲೆಗಳಲ್ಲಿ ಒಂದಾಯಿತು. 1984-85ರ ಶೈಕ್ಷಣಿಕ ಸಾಲಿನಿಂದ ಹುಡುಗರಿಗೂ ಪ್ರವೇಶವನ್ನು ಕಲ್ಪಿಸಲಾಯಿತು.ಅಂದಿನಿಂದ ಇಂದಿನವರೆಗೂ ತನ್ನ ಗುಣಮಟ್ಟದ ಛಾಪನ್ನು ಉಳಿಸಿಕೊಂಡಿರುವ ಹೆಗ್ಗಳಿಕೆ ಈ ಸಂಸ್ಥೆಯದ್ದು. ಈಗ ಭರ್ಜರಿಯಾದ ಎರಡು ಅಂತಸ್ತಿನ ಸುಂದರವಾದ ವಿಶಾಲ ಕಟ್ಟಡದಲ್ಲಿ ಸ್ಟೆಲ್ಲಾ ಮಾರಿಸ್ ಫ್ರೌಢಶಾಲೆ ಕಾರ‍್ಯನಿರ್ವಹಿಸುತ್ತಿದ್ದು ಊರಿಗೊಂದು ಶೋಭೆಯನ್ನು ತಂದಿದೆ. ಪ್ರಸ್ತುತ ಇಲ್ಲಿ ೪೯ ಹುಡುಗರು ಮತ್ತು ೪೨ ಹುಡುಗಿಯರು ಸೇರಿ ಒಟ್ಟು ೯೧ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಮುಖ್ಯೋಪಧ್ಯಾಯಿನಿ ವೈಲೆಟ್ ತಾವ್ರೋ ನೇತ್ರತ್ವದಲ್ಲಿ ಏಳು ಮಂದಿ ಶಿಕ್ಷಕರು ಶಿಕ್ಷಣ ಸೇವೆಗೆ ಕಟೀಬದ್ಧರಾಗಿ ನಿಂತಿದ್ದಾರೆ. ಸನಿಹದಲ್ಲಿ ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಯೂ ಬೆಳೆದುನಿಂತಿದೆ.  ಕುಂದಾಪ್ರ ಡಾಟ್ ಕಾಂ ವರದಿ.

ನರೇಂದ್ರ ಎಸ್. ಗಂಗೊಳ್ಳಿ
    ನರೇಂದ್ರ ಎಸ್. ಗಂಗೊಳ್ಳಿ

ಇಕೋಕ್ಲಬ್, ಸಾಹಿತ್ಯ ಸಂಘ,ಕ್ರೀಡಾ ಸಂಘ, ಚಿತ್ರಕಲಾ ಸಂಘ, ಸ್ಕೌಟ್ಸ್ ಮತ್ತು ಗೈಡ್ಸ್ ಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಕ್ರಿಯಾಶೀಲತೆಯನ್ನು ಬೆಳೆಸುವಲ್ಲಿ ನಿರಂತರವಾಗಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.ಶಿಕ್ಷಕ ರಕ್ಷಕ ಸಂಘವೂ ಪ್ರಮುಖ ಪಾತ್ರ ವಹಿಸುತ್ತಿದೆ. ಸದಾಕಾಲ ವಿದ್ಯಾರ್ಥಿಗಳ ವಿವಿಧ ಕಮಿಟಿಗಳು ಶಾಲೆಯ ನೈರ್ಮಲ್ಯ ,ಶಿಸ್ತು ಕಾಪಾಡಿಕೊಂಡು ಬರಲು ಸಹಕರಿಸುತ್ತಿವೆ.ಕಂಪ್ಯೂಟರ್ ಶಿಕ್ಷಣವನ್ನು ಭೋಧಿಸಲಾಗುತ್ತಿದೆ.

Click here

Click here

Click here

Click Here

Call us

Call us

ಕಳೆದ ಐವತ್ತು ವರುಷಗಳಲ್ಲಿ ಶೈಕ್ಷಣಿಕ ಕ್ರೇತ್ರದ ವಿವಿಧ ರಂಗಗಳಲ್ಲಿ ಸ್ಟೆಲ್ಲಾ ಮಾರಿಸ್ ತನ್ನದೇ ಆದ ಛಾಪನ್ನು ಮೂಡಿಸಿದೆ. ಸತತ ಒಂಬತ್ತು ಬಾರಿ ತಾಲೂಕು ಮಟ್ಟದ ಹುಡುಗರ ತ್ರೋ ಬಾಲನ್ನು ಗೆದ್ದ ಹೆಮ್ಮೆ ಅದರದ್ದು.ಈ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಹಲವಾರು ಉದಾಹರಣೆಗಳಿವೆ.ಮಿಮಿಕ್ರಿಯಲ್ಲೂ ರಾಜ್ಯಮಟ್ಟ ಪ್ರತಿನಿಧಿಸಿದ ಗರಿಮೆ ಇದಕ್ಕಿದೆ. ಎಸ್ಸೆಸೆಲ್ಸಿಯಲ್ಲಿ ರ‍್ಯಾಂಕ್ ಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹೊಂದಿದ ಖ್ಯಾತಿಯೂ ಇದರದ್ದು. ಪ್ರತಿಭಾ ಕಾರಂಜಿಗಳಲ್ಲಿ ಉತ್ತಮ ಸಾಧನೆಯನ್ನು ದಾಖಲಿಸುತ್ತಿದೆ. ಕುಂದಾಪ್ರ ಡಾಟ್ ಕಾಂ ವರದಿ.

ನಿಜ. ಯಾವುಧೇ ಜಾತಿ ಮತ ಪಂಥಗಳ ಹಂಗಿಲ್ಲದೇ ದೇವರೆಮ್ಮಯ ಬಲಂ ಎನ್ನುವ ಧ್ಯೇಯ ವಾಕ್ಯದೊಂದಿಗೆ ಊರ ಪರವೂರ ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕನ್ನು ತೋರಿದ ಸ್ಟೆಲ್ಲಾ ಮಾರಿಸ್ ಫ್ರೌಢ ಶಾಲೆ ಇದೀಗ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಡಿಸೆಂಬರ್ ತಿಂಗಳ ೧೭ ಮತ್ತು ೧೮ ರಂದು ೨ದಿನಗಳ ಸಭಾ ಸಾಂಸ್ಕೃತಿಕ ಕಾರ‍್ಯಕ್ರಮಗಳ ಜೊತೆಗೆ ಶಾಲೆಯ ಶ್ರೇಯೋಭಿವೃಧ್ದಿಗೆ ಶ್ರಮಿಸಿದವರನ್ನು ಅಭಿನಂದಿಸುವುದು, ಸ್ಮರಣ ಸಂಚಿಕೆ ಬಿಡುಗಡೆ, ನೂತನ ಧ್ವಜ ಸ್ತಂಭ ಉದ್ಘಾಟನೆ ಇನ್ನಿತರ ಕಾರ‍್ಯಕ್ರಮಗಳು ಹಳೆ ಹೊಸ ವಿದ್ಯಾರ್ಥಿಗಳ ಕೂಡುಗೊಳ್ಳುವಿಕೆಯಲ್ಲಿ ನಡೆಯಲಿದೆ.

Leave a Reply