ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿಂದೆ ಯುವ ಜನ ಮೇಳ ಎಂಬುಂದು ಒಂದು ಊರ ಹಬ್ಬ ಅಗುತ್ತಿತ್ತು. ಅದರೆ ಇಂದು ಯುವಕರಲ್ಲಿ ಹಾಗೂ ಪ್ರೇಕ್ಷಕರಲ್ಲೂ ಕೂಡ ಅಸಕ್ತಿ ಕಡಿಮೆ ಆಗ ತೋಡಗಿದೆ. ಯುವಜನ ಮೇಳದಲ್ಲಿ ಸ್ಪರ್ಧೆಗೊಳ್ಳುವ ನಮ್ಮ ವೀರಗಾಸೆ, ಗೀಗೀಪದ, ಕೋಲಾಟ, ಲಾವಣಿ ಸೇರಿದಂತೆ ಇನ್ನಿತರ ಸಾಂಪ್ರದಾಯಿಕ ಕಲೆಗಳನ್ನು ಇಂದು ಇಂಟರ್‌ನೆಟ್, ಮೊಬೈಲ್, ಸಾಮಾಜಿಕ ಜಾಲತಾಣಗಳು ನುಂಗಿವೆ. ನಮ್ಮ ಸಾಂಪ್ರದಾಯಿಕ ಕಲೆಗಳ ಬಗ್ಗೆ ಹಿನ್ನಲೆ ಕೂಡ ನಮಗೆ ಗೋತ್ತಿಲ್ಲ. ಹಿನ್ನಲೆ ಗೋತ್ತಿದ್ದರೇ ಉತ್ತಮ ನಿರ್ವಹಣೆ ಮತ್ತು ಪ್ರದರ್ಶನ ನೀಡಲು ಸಾಧ್ಯವಿದೆ ಎಂದು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಬೀಜಾಡಿ ಮೂಡು ಶಾಲಾ ವಠಾರದಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಬೀಜಾಡಿ ಹಾಗೂ ಮಿತ್ರ ಸಂಗಮ ಬೀಜಾಡಿ-ಗೋಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕುಂದಾಪುರ ತಾಲೂಕು ಯುವಜನ ಮೇಳ ‘ಸಂಗಮ-2016’ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಅವರು ಈ ಕಾರ್ಯಕ್ರಮ ನೀಡಿದ ಮಿತ್ರಸಂಗಮ ಸಂಸ್ಥೆ ಸೂರ್ಯಚಂದ್ರ ಇರುವ ತನಕ ಪ್ರಜ್ವಲಿಸಲಿ. ಇತಂಹ ಪರಿಸ್ಥಿಯಲ್ಲೂ ವಿಂಶತಿ ಉತ್ಸವದ ಅಂಗವಾಗಿ ಮಿತ್ರಸಂಗಮ ಸಂಸ್ಥೆ ಆಯೋಜಿಸಿದ ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕ್ಷರು ಸೇರಿಸಿದ ಯುವ ಶಕ್ತಿಯೇ ಈ ಮಿತ್ರಸಂಗಮ. ಈ ಒಗ್ಗೂಟಿನ ಯುವ ತಂಡಕ್ಕೆ ನಮ್ಮ ಸರ್ಕಾರ ಮತ್ತು ಇಲಾಖೆ ಪರವಾಗಿ ವಿಶೇಷ ಅಭಿನಂದನೆಗಳು ಎಂದು ಹೇಳಿ ಶುಭ ಹಾರೈಸಿದರು.
ಬೀಜಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಪ್ರೇಮಿ ಶೇಷಗಿರಿ ಗೋಟ ಬೀಜಾಡಿ, ಕುಂದಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ತೆಕ್ಕಟ್ಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಶೇಖರ ಕಾಂಚನ್ ಕೊಮೆ, ಮೀನುಗಾರಿಕಾ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಬಿ.ಹೆರಿಯಣ್ಣ ಛಾತ್ರಬೆಟ್ಟು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸೀತಾರಾಮ ಶೆಟ್ಟಿ, ಪ್ರಗತಿಪರ ಕೃಷಿಕ ರಫೀಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಯೋಜನಾಧಿಕಾರಿ ಅಮರಪ್ರಸಾದ್, ಕೋಟೇಶ್ವರ ವಲಯಾಧ್ಯಕ್ಷ ಮಾಧವ ಆಚಾರ್ಯ, ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್, ಅಧ್ಯಕ್ಷ ಅನುಪ್‌ಕುಮಾರ ಬಿ.ಆರ್, ಉಪಾಧ್ಯಕ್ಷ ಗಿರೀಶ್ ಕೆ.ಎಸ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ದೇವಾಡಿಗ, ಹಾಗೂ ಕೋಶಾಧಿಕಾರಿ ಶಂಕರನಾರಾಯಣ ಬಾಯಿರಿ ಉಪಸ್ಥಿತರಿದ್ದರು. ಇದೇ ಸಂದರ್ಭಲ್ಲಿ ಸಚಿವರಾದ ಬಳಿಕ ಪ್ರಪ್ರಥಮ ಬಾರಿಗೆ ಬೀಜಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಆಗಮಿಸಿದ ಸಚಿವರನ್ನು ಸಂಸ್ಥೆಗಳ ಪರವಾಗಿ ಮತ್ತು ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ಅಧಿಕಾರಿ ಕುಸುಮಾಕರ ಶೆಟ್ಟಿ ವಂದಿಸಿದರು.