ಗಂಗೊಳ್ಳಿ: ಮೈಸೂರು ಮಲ್ಲಿಗೆ ನಾಟಕ ಪ್ರದರ್ಶನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸಉದ್ದಿ.
ಗಂಗೊಳ್ಳಿ: ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರದರ್ಶಿಸಿದ ಮೈಸೂರು ಮಲ್ಲಿಗೆ ಕಿರುನಾಟಕ ತನ್ನ ವಿಭಿನ್ನತೆಯಿಂದ ಜನಮೆಚ್ಚುಗೆ ಗಳಿಸಿತು.

Call us

Click Here

ಕೆ.ಎಸ್ ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಕವನ ಸಂಕಲನದ ಹಲವು ಹಾಡುಗಳನ್ನು ಬಳಸಿಕೊಂಡು ಅದರ ಹಿನ್ನೆಲೆಯಲ್ಲಿ ಕವಿಯೊಬ್ಬನ ಬದುಕಿನ ಕಾಲ್ಪನಿಕವಾದ ಕತೆಯನ್ನು ಒಳಗೊಂಡ ಮೂವತೈದು ನಿಮಿಷಗಳ ನಾಟಕದಲ್ಲಿ ಪ್ರಣಯ, ವಿರಹ, ಅಪನಂಬಿಕೆ,ಸೈನಿಕನ ದೇಶಭಕ್ತಿ, ಸಾವು, ದುಖ, ಅಮ್ಮನ ವಾತ್ಸಲ್ಯ, ಹೆತ್ತವರ ತ್ಯಾಗ,ವೃದ್ಧಾಶ್ರಮ ಮೊದಲಾದ ವೈವಿಧ್ಯಮಯ ಅರ್ಥಪೂರ್ಣ ಸನ್ನಿವೇಶಗಳನ್ನು ಕಟ್ಟಿಕೊಡಲಾಗಿತ್ತು.

ಈ ಕಿರುನಾಟಕವನ್ನು ರಚಿಸಿ ಸಿದ್ಧ ಸಂಗೀತ ಅಳವಡಿಸಿ ನಿರ್ದೇಶಿಸಿದ್ದು ಅಲ್ಲಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ. ಕಿರುನಾಟಕ ತನ್ನ ವೇಗದ ಶೈಲಿ ಆಕರ್ಷಕವಾದ ಹಿನ್ನೆಲೆ ಸಂಗೀತ, ಹಾಡುಗಳು ಮತ್ತು ಮನಮುಟ್ಟುವಂತಹ ಮಕ್ಕಳ ಪ್ರೌಢ ಅಭಿನಯದಿಂದ ಗಮನ ಸೆಳೆಯಿತು. ಸಂದರ್ಭೋಚಿತವಾಗಿ ವಿವಿಧ ಕವಿಗಳ ಹಾಡುಗಳನ್ನು ಜನಪದ ಸಾಹಿತ್ಯವನ್ನು ,ಹಿನ್ನೆಲೆ ಸಂಗೀತವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಾದ ಆಶಾ, ಅಕ್ಷತಾ, ನಿಶ್ಮಿತಾ, ದೀಕ್ಷಾ, ರಜನಿ, ಸ್ನೇಹ, ವಾಸುಕಿ, ಸಂಜಯ್, ಅಶ್ಮಿತಾ ಮತ್ತು ರಂಜಿನಿ ಅವರ ಸಮರ್ಥ ಅಭಿನಯದಿಂದ ನಾಟಕವು ಪ್ರೇಕ್ಷಕರ ಮನಮುಟ್ಟುವಲ್ಲಿ ಸಫಲವಾಯಿತು.

Leave a Reply