ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2016-17ನೇ ಶೈಕ್ಷಣಿಕ ಸಾಲಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಕಾರ್ಯಕ್ರಮದ ಭಾಗವಾಗಿ ಹೊಸೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢ ಶಾಲೆಯ ಆವರಣದಲ್ಲಿ ಕುಂದಾಪುರದ ಅಗ್ನಿಶಾಮಕ ದಳದವರಿಂದ ಅರಿವು ಮತ್ತು ಪ್ರಾತ್ಯಕ್ಷಿಕೆ ನಡೆಯಿತು.
ಆರಕ್ಷಕ ಸಿಬ್ಬಂದಿ ರಾಘವೇಂದ್ರ ಆಚಾರ್ಯ ಮಾಹಿತಿ ನೀಡಿದರು. ಕುಂದಾಪುರ ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ನವೀನ್ ಸುಧೀಂದ್ರ ಉಡುಪ, ರಘುರಾಮ್ ಶೆಟ್ಟಿ ಹೆಗ್ಗದ್ದೆ, ರವೀಶ್ಚಂದ್ರ ಶೆಟ್ಟಿ ವಕೀಲರು, ತಾಲೂಕು ಪಂಚಾಯತ್ ಸದಸ್ಯ ಉದಯ್ ಪೂಜಾರಿ, ನಾರಾಯಣ ಶೆಟ್ಟಿ, ಗುರುರಾಜ ಆಚಾರ್ಯ, ರಾಘವೇಂದ್ರ ಗುಲ್ವಾಡಿ ಅಶೋಕ್ ಶೆಟ್ಟಿ ದೇವಲ್ಕುಂದ, ಪ್ರವೀಣ್ ಶೆಟ್ಟಿ ಹೊಸೂರು, ಎನ್.ಎಸ್.ಎಸ್. ಯೋಜನಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಸಹಯೋಜನಾಧಿಕಾರಿ ಪ್ರೀತಿ ಹೆಗ್ಡೆ, ಶಿಬಿರಾಧಿಕಾರಿಗಳಾದ ಚೇತನ್ ಶೆಟ್ಟಿ ಕೋವಾಡಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರವೀಣ್ ಮೊಗವೀರ ಗಂಗೊಳ್ಳಿ, ವಾಣಿಜ್ಯ ಉಪನ್ಯಾಸಕ ಶಿವರಾಜ್ ದೇವಾಡಿಗ ಉಪಸ್ಥಿತರಿದ್ದರು.