ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಗರದ ಪುರಸಭೆ ಎದುರಿನ ರಸ್ತೆಯಲ್ಲಿ ಹೊಸ ಸ್ವಿಫ್ಟ್ ಡಿಸೈರ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಡ್ಡದಿಡ್ಡಿ ಚಲಾವಣೆಗೊಂಡ ಪರಿಣಾಮ, ಎದುರಿಗೆ ಸಾಗುತ್ತಿದ್ದು ಕಾರು, ಬಸ್ಸು ಹಾಗೂ ಸೈಕಲ್ ಸವಾರರಿಗೆ ಡಿಕ್ಕಿ ಹೊಡೆದಿದ್ದು, ಸೈಕಲ್ ಸವಾರ ತಂದೆ ಮಗಳು ಗಂಭೀರ ಗಾಯಗೊಂಡಿದ್ದಾರೆ. ಕುಂದಾಪುರ ಮೀನು ಮಾರುಕಟ್ಟೆ ರಸ್ತೆ ಬಾಡಿಗೆ ಮನೆ ನಿವಾಸಿ ಕೋಲ್ಕತ್ತಾ ಮೂಲದ ಶ್ರೀಕಾಂತ (೨೬) ಹಾಗೂ ಅವರ ಪುತ್ರಿ ಸಚಿತಾ ಮೈತಿ ಗಾಯಗೊಂಡವರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ರಸ್ತೆಯ ಬದಿಗೆ ಸೈಕಲ್‌ನಲ್ಲಿ ಶ್ರೀಕಾಂತ್, ತನ್ನ ಮಗಳನ್ನು ಶಾಲೆಗೆ ಬಿಡಲು ಹೋಗುತ್ತಿರುವ ಸಂದರ್ಭದಲ್ಲಿ ಪುರಸಭೆ ವಾಹನ ಚಾಲಕ ವಿಜಯ್ ಎಂಬವರಿಗೆ ಸೇರಿದ ಸ್ವಿಫ್ಟ್ ಡಿಸೈರ್ ಕಾರ್ ಪುರಸಭೆs ಇನ್ನೋರ್ವ ಸಿಬ್ಬಂದಿ ದೀಪಕ್ ಕಚೇರಿಯ ಆವರಣದಿಂದ ರಸ್ತೆಗಿಳಿಸುವಾಗ ಏಕಾಏಕಿಯಾಗಿ ಕಾರಿನ ಎಕ್ಸಲೇಟರ್ ಅದುಮಿದ ದೀಪಕ್ ಸೈಕಲ್‌ಗೆ ಢಿಕ್ಕಿ ಹೊಡೆದ ನಂತರ ಇನ್ನೊಂದು ಕಾರಿಗೂ ಢಿಕ್ಕಿ ಹೊಡೆಯಿತು. ಖಾಸಗಿ ಬಸ್‌ಗೆ ಕಾರ್ ಢಿಕ್ಕಿ ಹೊಡೆಯಿತು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.