ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಿಗಾಗಿ ಬೈಂದೂರಿನಲ್ಲಿ ಜ.28ರಂದು ಹಮ್ಮಿಕೊಳ್ಳಲಾಗಿರುವ ’ವಿವೇಕ ಪರ್ವ’ ದೇಶಭಕ್ತ ಹೃದಯಗಳ ಅಪೂರ್ವ ಸಂಗಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ವಿವೇಕ್ ಬ್ಯಾಂಡ್‌ನ ನೂತನ ಟೀ ಶರ್ಟ್‌ಗಳನ್ನು ಬೈಂದೂರಿನ ಸಮರ್ಥ ಭಾರತ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.
ಸಮರ್ಥ ಭಾರತ ಬೈಂದೂರು ವಿಭಾಗದ ಕಾರ್ಯಾಧ್ಯಕ್ಷ ಜಯಾನಂದ್ ಹೋಬಳಿದಾರ್ ಹಾಗೂ ಸಹಸಂಚಾಲಕ ಭಿಮೇಶ್ ಕುಮಾರ್ ’ಬಿ ಗುಡ್ ಡೂ ಗುಡ್’ ಸಂದೇಶ ಹೊತ್ತ ಟೀಶರ್ಟ್ ಬಿಡುಗಡೆಗೊಳಿಸಿದರು.