ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಾಮಿ ವಿವೇಕಾನಂದರ 154ನೇ ಜನ್ಮದಿನಾಚರಣೆ ಅಂಗವಾಗಿ ಬೈಂದೂರಿನಲ್ಲಿ ಜ.28ರಂದು ನಡೆಯಲಿರುವ ’ವಿವೇಕ ಪರ್ವ’ ಬೃಹತ್ ಸಾರ್ವಜನಿಕ ಸಮಾರಂಭದ ಕರಪತ್ರ, ವಿವೇಕ್ ಬ್ಯಾಂಡ್ ಹಾಗೂ ಭಿತ್ತಿ ಪತ್ರವನ್ನು ನಾಗೂರು ಸಂದೀಪನ್ ಆಂಗ್ಲ ಮಾದ್ಯಮ ಶಾಲೆಯ ರಂಗಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.
ಸಂದೀಪನ್ ಶಾಲೆಯ ಅಧ್ಯಕ್ಷರಾದ ಪ್ರಕಾಶ್ ರಾವ್ ಬಿಡುಗಡೆಗೊಳಿಸಿದರು. ಸಮರ್ಥ ಭಾರತ ಬೈಂದೂರು ವಿಭಾಗದ ಗೌರವಾದ್ಯಕ್ಷ ವಿಶ್ವೇಶ್ವರ ಅಡಿಗ, ಕಾರ್ಯಾದ್ಯಕ್ಷ ಜಯಾನಂದ್ ಹೋಬಳಿದಾರ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್, ಸಂಚಾಲಕ ಶ್ರೀಧರ ಬಿಜೂರು, ಸಹ ಸಂಚಾಲಕ ಭೀಮೇಶ್, ಖಜಾಂಚಿ ಬಾಲಕೃಷ್ಣ ಬೈಂದೂರು, ಉದ್ಯಮಿಗಳಾದ ಗೋಪಾಲಕೃಷ್ಣ, ಪ್ರಕಾಶ್ ಭಟ್, ಗಿರೀಶ್ ಬೈಂದೂರು, ಲಿಂಗಯ್ಯ, ಶಿಕ್ಷಕರಾದ ಎ. ವೆಂಕಟೇಶ್, ರಾಜೇಶ್, ಗಣಪತಿ ಹೋಬಳಿದಾರ್, ಮಹೇಶ್ ಮಂಜೇಶ್ವರ, ಅನಿಲ್ ಕುಮಾರ್ ಟಿ. ಎನ್. ಸುರೇಶ್ ಮಲ್ಲಯ್ಯ ಮೊದಲಾದವರು ಜೊತೆಗಿದ್ದರು.