ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಇಫ್ತಾರ್ ಕೂಟ ಕಾರ್ಯಕ್ರಮವು ಜುಲೈ 3 ರಂದು ದುಬೈ ಯಲ್ಲಿ ನಡೆಯಲಿರುವುದು ಎಂದು ಕೆ ಐ ಸಿ ಕೇಂದ್ರ ಸಮಿತಿ ಅದ್ಯಕ್ಷರಾದ ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ ತಿಳಿಸಿದ್ದಾರೆ.
ಕೆ ಐ ಸಿ ಯುಎಇ ಕೇಂದ್ರ ಸಮಿತಿಯ 2015-16ರ ನೇ ಸಾಲಿನ ಮೊದಲ ದ್ವಿಮಾಸಿಕ ಸಭೆಯಲ್ಲಿ ಕೆ ಐ ಸಿ ಮುಂದಿನ ಕಾರ್ಯಚಟುವಟಿಕೆ ಗಳನ್ನು ಅನುಷ್ಠಾನ ಹಾಗೂ ಕ್ರಿಯಾ ಯೋಜನೆಗಳನ್ನು ಉಲ್ಲೇಕಿಸಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ಸಮುದಾಯಕ್ಕೆ ಪ್ರಭುದ್ದ ಉಲಮಾ ಗಳನ್ನೂ ಸಮರ್ಪಿಸಿ ಸಮಾಜದಲ್ಲಿ ಗುರುತಿಸಿ ಕೊಳ್ಳುವಂತಹ ಯುವ ಸಮೂಹಗಳನ್ನು ಪರಿಚಯಿಸಿಕೊಂಡು ಮುನ್ನಡೆಯುತ್ತಿರುವ ನಮ್ಮ ಸಂಸ್ಥೆಯು ಇಂದು ಅರಬ್ ರಾಷ್ಟ್ರಗಲಾದ್ಯಂತ ಪರಿಚಯಿಸಿಕೊಂಡು ಹಲವಾರು ಹಿತೈಷಿಗಳನ್ನು ತನ್ನದಾಗಿಸಿಕೊಂಡಿದೆ. ಇಂತಹ ದೀನೀ ಸಂಘ ಸಂಸ್ಥೆಗಳನ್ನು ಪೋಷಿಸಿಕೊಂಡು ಯುವ ಸಮೂಹಗಳು ಮುಂದೆ ಬರುವಂತೆ ಕರೆ ನೀಡಿದ ಅವರು ಮುಂದಿನ ದಿನಗಳಲ್ಲಿ ಕೆ ಐ ಸಿ ವಿಧ್ಯಾಸಂಸ್ಥೆಯು ಪ್ರಗತಿಯ ಮುಂಚೂಣಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಜುಲೈ 3 ಕ್ಕೆ ಕೆ ಐ ಸಿ – ಯು ಎ ಇ ವತಿಯಿಂದ ಇಫ್ತಾರ್ ಕೂಟ
ಪ್ರತಿ ವರ್ಷ ಕೆ ಐ ಸಿ ವಿಧ್ಯಾ ಸಂಸ್ಥೆಯ ಪ್ರಚಾರಾರ್ಥ ಇಫ್ತಾರ್ ಕೂಟ ಕಾರ್ಯಕ್ರವನ್ನು ಜುಲೈ 3 ರಂದು ನಡೆಸಲು ಉದ್ದೇಶಿಸಿದ್ದು ಈ ಕಾರ್ಯಕ್ರಮದಲ್ಲಿ ತಾಯಿ ನಾಡಿನಿಂದ ಕೆ ಐ ಸಿ ವಿಧ್ಯಾ ಸಂಸ್ಥೆಯ ಪ್ರತಿನಿಧಿಗಳು, ಧಾರ್ಮಿಕ ಸಾಮಾಜಿಕ ನೇತಾರರು , ಹಾಗೂ ಆನಿವಾಸಿ ಕೆ ಐ ಸಿ ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದು ಕೆ ಐ ಸಿ ಪಧಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .ಈ ಕಾರ್ಯಕ್ರಮದ ಹೆಚ್ಚಿನ ವಿವರಗಳನ್ನು ಪತ್ರಿಕಾ ಮಾಧ್ಯಮಗಳ ಮೂಲಕ ಮುಂದಿನ ದಿನಗಳಲ್ಲಿ ಪ್ರಕಟಿಸಲಿದ್ದು ದೀನೀ ಸ್ನೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೆ ಐ ಸಿ ಸಂಘಟಕರು ವಿನಂತಿಸಿಕೊಂಡಿರುತ್ತಾರೆ. ಕಾರ್ಯಕ್ರಮದಲ್ಲಿ ಶರೀಫ್ ಕಾವು ,ಅಬ್ದುಲ್ ಖಾದರ್ ಬೈತಡ್ಕ, ಅಬ್ದುಲ್ ಸಲಾಂ ಬಪ್ಪಲಿಗೆ , ಅಬ್ದುಲ್ ರಜಾಕ್ ಮಣಿಲ , ಜಬ್ಬಾರ್ ಬೈತಡ್ಕ , ಹನೀಫ್ ಆರ್ಯಮೂಲೇ ಅಬ್ದುಲ್ ರಝಾಖ್ ಬುಲೆರಿಕಟ್ಟೆ, ,ಅಬ್ಬಾಸ್ ಕೆಕುಡೆ, ಇಕ್ಬಾಲ್ ಬೈತಡ್ಕ , ಹಮೀದ್ ಮಣಿಲ, ಹಾಗೂ ಅಧೀನ ಸಮಿತಿ ಘಟಕ ಗಳ ಪದಾದಿಕಾರಿಗಳು ಉಪಸ್ಥಿತರಿದ್ದರು.ಆಸೀಫ್ ಮರೀಲ್ ವರದಿ ವಾಚಿಸಿ ,ಅಶ್ರಫ್ ಪರ್ಲದ್ಕ ಸ್ವಾಗತಿಸಿ ವಂದಿಸಿದರು.