ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಲಾವಣ್ಯ ರಿ. ಬೈಂದೂರು 40ನೇ ವರ್ಷದ ಸಂಭ್ರಮದ ಅಂಗವಾಗಿ ಜನವರಿ 27ರಿಂದ ಫೆಬ್ರವರಿ 05ವರೆಗೆ ಹಮ್ಮಿಕೊಂಡಿರುವ ಕಲಾಮಹೋತ್ಸವ ಹತ್ತು ದಿನಗಳ ಕಲಾ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬೈಂದೂರು ಸೇನೇಶ್ವರ ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು. ಲಾವಣ್ಯ ಬೈಂದೂರು ಕಾರ್ಯಕಾರಿ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಗೌರವಾಧ್ಯಕ್ಷ ಶ್ರೀನಿವಾಸ ಪ್ರಭು, ವ್ಯವಸ್ಥಾಪಕರಾದ ಬಿ. ಗಣೇಶ್ ಕಾರಂತ್, ಬಿ. ರಾಮ ಟೈಲರ್, ಗಣಪತಿ ಎಸ್., ಮೊದಲಾದವರು ಉಪಸ್ಥಿತರಿದ್ದರು.