ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಾಮಿ ವಿವೇಕಾನಂದರ ೧೫೪ ನೇ ಜನ್ಮ ದಿನಾಚರಣೆ ಅಂಗವಾಗಿ ಸಮರ್ಥ ಭಾರತ ಬೈಂದೂರು ಕಾರ್ಯಾಲಯದಲ್ಲಿ “ಉತ್ತಮನಾಗು ಉಪಕಾರಿಯಾಗು” ಎಂಬ ಸಂದೇಶವಿರುವ ಬ್ಯಾಂಡನ್ನು ಧರಿಸಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಹಂಚಿಕೊಳ್ಳಲಾಯಿತು.
ಸಮರ್ಥ ಭಾರತ ಸಂಚಾಲಕ ಶ್ರೀಧರ್ ಬಿಜೂರು ರವರು ಬೌದ್ಧಿಕ್ ನಡೆಸಿಕೊಟ್ಟರು. ಕಾರ್ಯಾಧ್ಯಕ್ಷ ಜಯಾನಂದ ಹೋಬಳಿದಾರ್, ಭಿಮೇಶ್ ಕುಮಾರ್ ಎಸ್.ಜಿ, ಗೋಪಾಲ ಕೃಷ್ಣ, ಶರತ್ ಶೆಟ್ಟಿ ಉಪ್ಪುಂದ, ರಾಜೇಶ್ ಬಿಜೂರು, ಗಣೇಶ್ ಗಾಣಿಗ, ಸುಕುಮಾರ ಶೆಟ್ಟಿ, ಸುರೇಶ್ ಬಿಜೂರು, ರಾಜೇಶ್ ಹೋಬಳಿದಾರ್, ಕೃಷ್ಣ ಕೊಡೇರಿ. ಲಿಂಗಯ್ಯ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.