ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ತಾಲೂಕು ಹೋರಾಟ ಸಮಿತಿಯು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಫೆಬ್ರವರಿ ೮ ೨೦೧೩ ರಂದು ಬಜೆಟ್‌ನಲ್ಲಿ ಘೋಷಣೆಯಾದ ಎಲ್ಲಾ ೪೩ ತಾಲೂಕುಗಳನ್ನ ಒಂದೇ ಹಂತದಲ್ಲಿ ಅನುಮೋದಿಸಬೇಕೆಂದು ಈ ಸಂಧರ್ಭದಲ್ಲಿ ಒತ್ತಾಯಿಸಲಾಯಿತು. ಕಂದಾಯ ಸಚಿವರ ಹೇಳಿಕೆ ಆದ್ಯತೆ ಮೇಲೆ ಕೇವಲ ೩೩ ತಾಲೂಕುಗಳನ್ನ ರಚಿಸುವ ವಿಚಾರವನ್ನ ಕೈಬಿಟ್ಟು ಯಾವುದೇ ಕಾರಣಕ್ಕೂ ಘೋಷಣೆಯಾದ ೪೩ ತಾಲೂಕುಗಳನ್ನು ತುಂಡರಿಸುವ ವಿಚಾರಕ್ಕೆ ರಾಜ್ಯ ಸಮಿತಿ ವಿರೋಧ ವ್ಯಕ್ತಪಡಿಸಿತು.
ಈ ಸಂಧರ್ಭದಲ್ಲಿ ಕಂದಾಯ ಸಚಿವರು ಅನುದಾನದ ಸಮಸ್ಯೆ ಮತ್ತು ಬೇರೆಲ್ಲಾ ವಿಚಾರಗಳನ್ನ ವಿಮರ್ಶೆ ಮಾಡಿ ಸರಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಅಭಿಪ್ರಾಯವನ್ನು ರಾಜ್ಯ ಸಮಿತಿಗೆ ನೀಡಿದರು. ಮನವಿಯಲ್ಲಿ ರಾಜ್ಯ ಸಮಿತಿಯೂ ಸರಕಾರದ ಹೊಸ ತಾಲೂಕುಗಳಿಗೆ ಕನಿಷ್ಟ ಅನುದಾನವನ್ನ ನೀಡಿದರೂ ಕೂಡಾ ಯಾವುದೇ ತಾಲೂಕು ಕೂಡಾ ವಿರೋಧ ವ್ಯಕ್ತ ಪಡಿಸುವುದಿಲ್ಲ ಎನ್ನುವ ಭರವಸೆಯನ್ನು ನೀಡಿತು. ಈ ಸಂಧರ್ಭದಲ್ಲಿ ಸಚಿವರು ಎಲ್ಲಾ ವಿಚಾರಗಳನ್ನ ಪರಿಶೀಲಿಸುತ್ತೇವೆ ಎನ್ನುವ ಭರವಸೆ ನೀಡಿದರು. ನಿಯೋಗದಲ್ಲಿ ಅಧ್ಯಕ್ಷ ಬಸವರಾಜ ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಾರ್ಕೂರು ಸತೀಶ್ ಪೂಜಾರಿ, ನಾಗರಾಜ್ ಹೊಂಗಳ್, ದೀಪಕ್ ಕುಮಾರ್ ಶೆಟ್ಟಿ, ಅಶೋಕ್ ಗುತ್ತೇದಾರ್, ರಾಮಣ್ಣ ಭಜಂತ್ರಿ, ಸಂಗಣ್ಣ ಈರಣ್ಣ, ಜಯಶ್ರೀರಾವ್, ಯಮನಾ ರಾಮಣ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು.