ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವುದಲ್ಲದೇ ಬದುಕಿಗೆ ಅಗತ್ಯವಾದ ಉತ್ತಮ ಮೌಲ್ಯಗಳನ್ನು ನೀಡುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ ಹೇಳಿದರು. ಅವರು ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ೪೦ ಸಂಭ್ರಮದ ಅಂಗವಾಗಿ ಜರುಗುತ್ತಿರುವ ರಂಗ ಲಾವಣ್ಯ – ಕಲಾಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಾವಿದರಾದ ಚಂದ್ರ ಬಂಕೇಶ್ವರ್, ಸುಬ್ರಹ್ಮಣ್ಯ ಜಿ. ಉಪ್ಪುಂದ, ದಿನೇಶ್ ಪ್ರಭು ಉಪ್ಪುಂದ, ದುರ್ಗಾ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಲಾವಣ್ಯದ ಸ್ಥಾಪಕ ಸದಸ್ಯ ಅನಿಲ್‌ಕುಮಾರ್ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರಕಾಶ್ ಕೊಡಂಚ ಶುಭಶಂಸನೆಗೈದರು. ಉದ್ಯಮಿ ಮೀರಾನ್ ಸಾಹೇಬ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಗಣೇಶ್ ಮಯ್ಯ ಉಪ್ಪುಂದ, ಲಾವಣ್ಯ ಬೈಂದೂರು ಅಧ್ಯಕ್ಷ ಗಿರೀಶ್ ಬೈಂದೂರು, ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ, ಕಾರ್ಯದರ್ಶಿ ನಾರಾಯಣ ಕೆ ಮೊದಲಾದವರು ಉಪಸ್ಥಿತರಿದ್ದರು. ಲಾವಣ್ಯದ ಗೌರವಾಧ್ಯಕ್ಷ ಶ್ರೀನಿವಾಸ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ ಕಾರಂತ್ ವಂದಿಸಿದರು. ದಯಾನಂದ ಪಿ. ಕಾರ್ಯಕ್ರಮ ನಿರೂಪಿಸಿದರು.