ಹೆಮ್ಮಾಡಿ ಪೇಟೆಯಲ್ಲಿ ಗಮನ ಸೆಳೆದ ಯೋಗ ನಡಿಗೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆಮ್ಮಾಡಿಯ ಆಧ್ಯಾತ್ಮಿಕ ಯೋಗ ಕಲಿಕಾ ಕೇಂದ್ರದ ಯೋಗ ಬಂಧುಗಳಿಂದ ಹೆಮ್ಮಾಡಿ ಪೇಟೆ ಪರಿಸರದಲ್ಲಿ ಸಾರ್ವಜನಿಕರಲ್ಲಿ ಯೋಗದ ಅರಿವನ್ನು ಮೂಡಿಸುವ ಸಲುವಾಗಿ ಯೋಗ ನಡಿಗೆ ಕಾರ್ಯಕ್ರಮವನ್ನು ನಡೆಸಿ ಎಲ್ಲರ ಗಮನ ಸೆಳೆದರು.

Call us

Click Here

ಸಂಘದ ಎಲ್ಲಾ ಯೋಗ ಬಂಧುಗಳು ಯೋಗದ ಮಹತ್ವವನ್ನು ಸಾರುವ ಭಿತ್ತಿ ಪತ್ರಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಸಂಘದ ವಾರ್ಷಿಕ ದಿನಾಚರಣೆಯನ್ನು ಆಚರಿಸಲಾಯಿತು. ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಹರೀಶ ಉದ್ಘಾಟಿಸಿದರು. ಸಂಘದ ಎಲ್ಲಾ ಯೋಗ ಬಂಧುಗಳು ವಿವಿಧ ರೀತಿಯ ಯೋಗಾಸನಗಳನ್ನು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ರೂಪದಲ್ಲಿ ತೋರಿಸಿಕೊಟ್ಟರು.

ಸಂಪನ್ಮೂಲ ವ್ಯಕ್ತಿ ಕನರಾಡಿ ವಾದಿರಾಜ್ ಭಟ್ ಮಾತನಾಡಿ ನಿತ್ಯ ಜೀವನದಲ್ಲಿ ಯೋಗ ಅಳವಡಿಕೆ ಮತ್ತು ಆತ್ಮ ಸಾಕ್ಷಾತ್ಕಾರವೇ ಯೋಗಿಯ ಪರಮ ಧ್ಯೇಯವಾಗಿರಬೇಕು ಎಂದರು. ವಿವಿಧ ಗ್ರಾಮಗಳಲ್ಲಿ ಯೋಗ ತರಬೇತಿಯನ್ನು ನಡೆಸುತ್ತಿರುವ ಹುಣ್ಸೆಮಕ್ಕಿ ಯೋಗ ಸಂಘದ ಅನಿಲ್‌ಕುಮಾರ್ ಶೆಟ್ಟಿ, ಬಸ್ರೂರಿನ ಪ್ರಭಾಕರ ಐತಾಳ್, ಉಪ್ಪಿನಕುದ್ರುವಿನ ಶ್ರೀಧರ ರಾವ್, ಕಟ್‌ಬೆಲ್ತೂರಿನ ನಂದಿ ದೇವಾಡಿಗ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಗ ಗುರುಗಳಾದ ಪ್ರವೀಣ್ ಶುಭಸಂಸನೆಗೈದರು ಯೋಗಿಶ್ ಆಚಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿವಾಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು ಸುಬ್ರಹ್ಮಣ್ಯ ಆಚಾರ್ ವಂದಿಸಿದರು.

Leave a Reply