ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕ್ವಾಡಿ ಗೋಳಿಹಾಡಿ ಶ್ರೀ ನಂದಿಕೇಶ್ವರ ಹಾಗೂ ಪಂಜುರ್ಲಿ ದೈವಸ್ಥಾನದ ಹಾಲು ಹಬ್ಬ ಹಾಗೂ ಗೆಂಡಸೇವೆ ವಿಶೇಷವಾಗಿ ಜರುಗಿದವು.
ದೈವಸ್ಥಾನಕ್ಕೆ ಆಗಮಿಸಿದ್ದ ಉದ್ಯಮಿ ವಿ. ಕೆ. ಮೋಹನ್ ಅವರೊಂದಿಗೆ ಬಿಗ್‌ಬಾಸ್ ಸೀಜನ್-೪ ವಿಜೇತ ಪ್ರಥಮ್ ಹಾಗೂ ಬಿಗ್‌ಬಾಸ್‌ನ ಇತರೇ ಸ್ವರ್ಧಿಗಳಾಗಿದ್ದ ಮೋಹನ್, ಭುವನ್, ರೇಖಾ, ಕಾವ್ಯ ಶಾಸ್ತ್ರಿ, ಕಿರುತೆರೆ ನಟರಾದ ಸೂರ್ಯ, ವಿರಾಟ್ ಮೊದಲಾದವರು ಕುಂದಾಪುರಕ್ಕೆ ಆಗಮಿಸಿದ್ದರು. ನಟರನ್ನು ನೋಡಲು ಜನರು ಮುಗಿಬಿಳುತ್ತಿದ್ದುದು ಕಂಡುಬಂತು.