ಕಲೆಯ ಮೂಲಕ ಜೀವಂತವಾಗಿರುವ ಕಲಾವಿದ ಭೋಜು ಹಾಂಡ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಳತೆ, ತಾಳ್ಮೆ ಹಾಗೂ ಜೀವನ ಪ್ರೀತಿಯ ನಡೆನುಡಿಯಿಂದಾಗಿ ಎಲ್ಲರೊಂದಿಗೂ ಉತ್ತಮ ಒಡನಾಟವಿಟ್ಟುಕೊಂಡಿದ್ದ ಕಲಾವಿದ ಭೋಜು ಹಾಂಡರು ಭೌದ್ಧಿಕವಾಗಿ ನಮ್ಮನ್ನಗಲಿದ್ದರೂ ಅವರು ತೋರಿದ ದಾರಿಯಲ್ಲಿಯೇ ನಡೆಯುವ ಮೂಲಕ ಅವರ ಕನಸುಗಳನ್ನು ಜೀವಂತವಾಗಿರಿಸಬೇಕಿದೆ ಎಂದು ರೋಟರಿ ಕುಂದಾಪುರ ದಕ್ಷಿಣದ ಮಾಜಿ ಅಧ್ಯಕ್ಷ ಕೆ. ಕೆ. ಕಾಂಚನ್ ಹೇಳಿದರು.

Call us

Click Here

ಅವರು ವಡೇರಹೋಬಳಿ ಹೈಸ್ಕೂಲು ಸಭಾಂಗಣದಲ್ಲಿ ಸಮುದಾಯ ಕುಂದಾಪುರ ಸಂಘಟನೆಯ ಆಶ್ರಯದಲ್ಲಿ ದಿ. ಭೋಜು ಹಾಂಡರ ನೆನಪಿಗಾಗಿ ಜರುಗಿದ ವರ್ಣಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ ಚಿತ್ರಕಲೆಯ ಅರಿವೂ ಇಲ್ಲದವರಿಗೂ ಕಲೆಯ ಬಗೆಗೆ ಸೆಳವು ಮೂಡಿಸಿ ಉತ್ಸುಕತೆಯಿಂದ ಕಲಿಸುವ ಪ್ರವೃತ್ತಿ ಭೋಜು ಹಾಂಡರಲ್ಲಿತ್ತು. ಹುಟ್ಟು ಸಾವಿನ ನಡುವಿನ ಸಾರ್ಥಕ್ಯ ಜೀವನವನ್ನು ಜೀವಿಸಿದ್ದ ಅವರ ನೆನಪನ್ನು ತಮ್ಮ ವ್ಯಕ್ತಿತ್ವದ ಮೂಲಕ ಚಿರಸ್ಥಾಯಿಯಾಗಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವ್ಕರ್ ಮಾಡನಾಡಿ ಭೋಜು ಹಾಂಡರು ಉಸಿರಾಡುವ ಮೂಲಕ ಮಾತ್ರ ಜೀವಂತಿಕೆಯನ್ನಿಟ್ಟುಕೊಂಡವರಲ್ಲ. ದೊಡ್ಡ ದೊಡ್ಡ ಕನಸುಗಳನ್ನಿಟ್ಟುಕೊಂಡು ಬದಲಾವಣೆಯನ್ನು ಬಯಸಿದ್ದವರಾಗಿದ್ದರು. ಎಷ್ಟೋ ಮಕ್ಕಳಿಗೆ ಕಲೆಯ ಧಾರೆ ಎರೆದಿದ್ದ ಅವರು ಈಗಲೂ ಕಲೆಯ ಮೂಲಕವೇ ಜೀವಂತವಾಗಿದ್ದಾರೆ. ಸಾಮಾನ್ಯವಾಗಿ ಶಿಕ್ಷಕರು ಸೇವೆ ಸಲ್ಲಿಸುವ ಶಾಲೆಯಲ್ಲಿ ಮಾತ್ರ ಅವರಿಗೆ ವಿದ್ಯಾರ್ಥಿಗಳಿರುತ್ತಾರೆ. ಆದರೆ ಭೋಜು ಹಾಂಡ ಅವರಿಗೆ ಕುಂದಾಪುರದ ಹಲವು ಶಾಲೆಗಳ ಮಕ್ಕಳು ಚಿತ್ರಕಲಾ ವಿದ್ಯಾರ್ಥಿಗಳಾಗಿದ್ದರು. ಕಲೆಯ ಮೂಲಕ ಜಗತ್ತಿನ ಬಗೆಗೆ ಭಿನ್ನ ನೋಟ, ಹೊಸ ಬದುಕು ಹಾಗೂ ವ್ಯಕ್ತಿತ್ವ ಕಟ್ಟಿಕೊಳ್ಳಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು ಧೀಮಂತಿಕೆ ಅವರದ್ದಾಗಿತ್ತು ಎಂದು ಸ್ಮರಿಸಿದರು.

ಕೋಟೇಶ್ವರ ಜ್ಯೂನಿಯರ್ ಕಾಲೇಜಿನ ಉಪಪ್ರಾಂಶುಪಾಲ ಪ್ರಭಾಕರ ಮಿತ್ಯಾಂತ, ಕೋಡಿ ಬ್ಯಾರೀಸ್ ಶಾಲೆಯ ಚಿತ್ರಕಲಾ ಶಿಕ್ಷಕ ರಮೇಶ್ ಹಾಂಡ, ಸಿದ್ಧಾಪುರ ಸರಕಾರಿ ಪ್ರೌಡಶಾಲೆಯ ಹಿರಿಯ ಚಿತ್ರಕಲಾ ಶಿಕ್ಷಕ ವೇಣುಗೋಪಾಲ ಶೆಟ್ಟಿ, ಸಮುದಾಯ ಕುಂದಾಪುರದ ಸಂಘಟನಾ ಕಾರ್ಯದರ್ಶಿ ಜಿ.ವಿ ಕಾರಂತ್ ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕರು ಹಾಗೂ ಅಭಿಮಾನಿಗಳು ಮಾತನಾಡಿದರು.

ಕೆದೂರು ಶಾಲೆಯ ಚಿತ್ರಕಲಾ ಶಿಕ್ಷಕ ಶಿವಾನಂದ ಅವರು ಕ್ಯಾನ್ವಸ್‌ನಲ್ಲಿ ಭೋಜು ಹಾಂಡರ ಚಿತ್ರ ಬಿಡಿದರು. ವಾಸುದೇವ ಗಂಗೇರ ಸ್ವಾಗತ ಗೀತೆ ಹಾಡಿದರು. ಉಪ್ಪೂರು ಶಾಲೆಯ ಚಿತ್ರಕಲಾ ಶಿಕ್ಷಕಿ ಕಾವೇರಿ ವಂದಿಸಿದರು. ಸಮುದಾಯದ ಕಾರ್ಯದರ್ಶಿ ಸದಾನಂದ ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಚಿತ್ರಕಲಾ ವಿದ್ಯಾರ್ಥಿಗಳು ಚಿತ್ರ ಹಾಗೂ ಪೇಪರ್ ಕ್ರಾಫ್ಟ್‌ಗಳನ್ನು ರಚಿಸಿದರು. ಸಮುದಾಯದ ಕಲಾವಿದರಿಂದ ಸಂಗೀತ ಗಾಯನ ಜರುಗಿತು.

Click here

Click here

Click here

Click Here

Call us

Call us

Leave a Reply