ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಮತ್ತು ಶ್ರೀ ಚಿಕ್ಕು ಯುವ ಸಂಘಟನೆ ಹಿಜಾಣ ಇವರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂಧತ್ವ ನಿವಾರಣಾ ವಿಭಾಗ) ಉಡುಪಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ವಂಡ್ಸೆ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಜ.೨೯ರಂದು ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ಶಿಬಿರವನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಉದ್ಘಾಟಿಸಿ ಕಣ್ಣಿನ ದೃಷ್ಠಿ ಸರಿಯಾಗಿದ್ದರೆ ಬದುಕಿನ ದೃಷ್ಠಿ ಚನ್ನಾಗಿರಲು ಸಾಧ್ಯ ಆದುದರಿಂದ ಮಾನವನ ಅಮೂಲ್ಯ ಆಸ್ತಿಗಳಾಗಿರುವ ಕಣ್ಣಿನ ದೋಷವನ್ನು ಸರಿಪಡಿಸಿಕೊಂಡು ಜೋಪಾನವಾಗಿ ನೋಡಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯಿನಿ ಮೋಹಿನಿ ಬಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿಜಾಣದ ಚಿಕ್ಕು ದೈವಸ್ಥಾನದ ಆಡಳಿತ ಮೋಕ್ತೇಸರ ಎಚ್. ರಘುರಾಮ ಶೆಟ್ಟಿ ಹಿಜಾಣ, ಶ್ರೀ ಚಿಕ್ಕು ಯುವ ಸಂಘಟನೆಯ ಅಧ್ಯಕ್ಷ ರವಿಕುಮಾರ್ ಶೆಟ್ಟಿ ಬೆಳ್ವಾಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರ ರಾಯಪ್ಪನಡಿ, ಚಿತ್ತೂರು ಗ್ರಾ. ಪಂ. ಉಪಾಧ್ಯಕ್ಷ ಅಣ್ಣಪ್ಪ ನಾಯ್ಕ್ ನ್ಯಾಗಳಮನೆ, ನ್ಯಾಯವಾದಿ ಕುಸುಮಾಕರ ಶೆಟ್ಟಿ, ಪ್ರಸಾದ ನೇತ್ರಾಲಯದ ಡಾ. ಸುಶಾಂತಾ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಮಧುಕರ, ಶ್ರೀ ಚಿಕ್ಕು ಯುವ ಸಂಘಟನೆಯ ಮಾಜಿ ಅಧ್ಯಕ್ಷ ದೇವು ಮೆಂಡನ್, ಜಯರಾಮ್ ಶೆಟ್ಟಿ ಬೆಳ್ವಾಣ, ಶ್ರೀ ಚಿಕ್ಕು ಯುವ ಸಂಘಟನೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಂಪತ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಂತೋಷ ರಾಯಪ್ಪನಡಿ ವಂದಿಸಿದರು.